ಕುಂದಾಪುರ ಮಿರರ್ ಸುದ್ದಿ…
ಕೋಟ: ಗಿಳಿಯಾರು ಜನಸೇವಾ ಟ್ರಸ್ಟ್‌ನ ಹಸಿರು ಅಭಿಯಾನದ ಮೊದಲ ಕಾರ್ಯಕ್ರಮ ಟೀಮ್ ಅಭಿಮತ ನೇತೃತ್ವದಲ್ಲಿ ಐರೋಡಿ, ಗೋಳಿಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಔಷಧೀಯ ಗುಣವುಳ್ಳ ಲಕ್ಷ್ಮಣ ಫಲ ಗಿಡಗಳ ವಿತರಿಸುವ ಮೂಲಕ ಚಾಲನೆಗೊಂಡಿತು.
ಸ್ಥಳೀಯರಾದ ರಮೇಶ್ ಕಾರಂತರಿಂದ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಗಿಳಿಯಾರು ರವರಿಗೆ ಸಸಿ ನೀಡುವ ಮೂಲಕ ಶುಭ ಕೋರಿದರು, ಈ ಸಂದರ್ಭದಲಿ ಜನಸೇವೆ ಟ್ರಸ್ಟ್‌ನ ಅಧ್ಯಕ್ಷ ವಸಂತ್ ಗಿಳಿಯಾರು, ಕಾರ್ಯಕಾರಿ ಸಮಿತಿಯ ಸದಸ್ಯ ಸಫಲ್ ಶೆಟ್ಟಿ, ಕಾರ್ಯ ನಿರ್ವಾಹಣಾಧಿಕಾರಿ ರಾಘವೇಂದ್ರ ರಾಜ್ ಸಾಸ್ತಾನ ಉಪಸ್ಥಿತರಿದ್ದರು.