ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಐಸಿರಿ ಫೌಂಡೇಶನ್ ಮತ್ತು ಶ್ರೀ ಕುಂತಿಅಮ್ಮ ಸೇವಾ ಬಳಗ, ತಲ್ಲೂರು ಇವರ ಸಹಭಾಗಿತ್ವದಲ್ಲಿ ನಡೆದ ನಿರ್ಮಲ ನಗರ ಅಭಿಯಾನ ಕಾರ್ಯಕ್ರಮಕ್ಕೆ ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭೀಮವ್ವ ಚಾಲನೆ ನೀಡಿದರು.
ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಶ್ರೀ ಕುಂತಿಅಮ್ಮ ಸೇವಾ ಬಳಗದ ಸದಸ್ಯರು ಸೇರಿ ಮಹಾಲಿಂಗೇಶ್ವರ ದೇವಸ್ಥಾನದಿಂದ ತಲ್ಲೂರು ಪೇಟೆಯ ಮೂಲಕ ಶ್ರೀ ಕುಂತಿಅಮ್ಮ ದೇವಸ್ಥಾನದವರೆಗೆ ಸ್ವಚ್ಛತೆ ಕೈಗೊಂಡರು.
ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ನಾಯಕ್, ಕುಂತಿಅಮ್ಮ ಸೇವಾ ಬಳಗದ ಅಧ್ಯಕ್ಷ ಪ್ರಶಾಂತ್, ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಉಪಸ್ಥತರಿದ್ದರು.