ಕುಂದಾಪುರ :ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕುಂದಾಪುರ – ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ‘ವಸುದೈವ ಕುಟುಂಬಕಂ’

0
411

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಕುಂದಾಪುರ ಇಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ವಸುದೈವ ಕುಟುಂಬಕಂ ಆಚರಿಸಲಾಯಿತು.

Click Here

ಕುಂದಾಪುರದ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿಲ್ಪಾ ಅವರು ಮಾತನಾಡಿ ಯೋಗಭ್ಯಾಸದಲ್ಲಿ ಬರುವ ಉಸಿರಾಟ ಮತ್ತು ಸಮತೋಲನ ಆಸನಗಳು ಮೆದುಳಿನ ಎಲ್ಲಾ ಕಡೆಗಳಲ್ಲೂ ಸಮತೋಲನ ಕಾಪಾಡುತ್ತದೆ. ಇಂದು ವಿಶ್ವದಾದ್ಯಂತ ಕೋಟಿಗಟ್ಟಲೆ ಜನರು ವಸುದೈವ ಕುಟುಂಬಕಂ ಎಂಬ ವಿಷಯದ ಮೇಲೆ ಒಗ್ಗಟ್ಟಾಗಿ ಯೋಗ ಮಾಡುತ್ತಿದ್ದಾರೆ ಎಂದು ವಸುದೈವ ಕುಟುಂಬಕಂ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಂತರ ವಿವಿಧ ಯೋಗ ಅಭ್ಯಾಸಗಳನ್ನ ವಿದ್ಯಾರ್ಥಿಗಳಿಗೆ ಮಾಡಿಸಿದರು. ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ರವೀಂದ್ರ ನಾಯಕ್ ಇವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಸಂಸ್ಥೆಯ ಉಪ ಪ್ರಾಂಶುಪಾಲರಾದ ಕಿರಣ ಹೆಗ್ಡೆಯವರು ವಿದ್ಯಾರ್ಥಿಗಳಿಗೆ ಯೋಗ ದಿನದ ಮಹತ್ವವನ್ನು ತಿಳಿಸುತ್ತಾ ಯೋಗವು ನಮ್ಮಲ್ಲಿರುವ ಭಾವವನ್ನು ಬಲಪಡಿಸುತ್ತದೆ ಆಂತರಿಕ ದೃಷ್ಟಿಯನ್ನು ವಿಸ್ತರಿಸುತ್ತದೆ. ಸಹಜೀವಿಗಳ ಜೊತೆ ಐಕ್ಯತೆ ಮತ್ತು ಪ್ರೀತಿಯನ್ನು ಬೆಳೆಸುತ್ತದೆ ಎಂದರು ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಮಡಿವಾಳ ಎಂ ಕಾರ್ಯಕ್ರಮವನ್ನು ಸಂಘಟಿಸಿದ್ದರು.

LEAVE A REPLY

Please enter your comment!
Please enter your name here