ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಸ್ತಾನದ ಹಂಗಾರಕಟ್ಟೆ, ಕೋಡಿ ಬೆಂಗ್ರೆ, ಜಟ್ಟಿ ಕೋಡಿ ಮೀನುಗಾರಿಕಾ ಜಟ್ಟಿಗಳ ಬಗ್ಗೆ ಹಾಗೂ ಕರಾವಳಿಯ ಕಡಲ ಕೊರೆತ ಹಾಗೂ ಮೀನುಗಾರರ ಸಮಸ್ಯೆಗಳನ್ನು ಚರ್ಚಿಸಿ ಸಚಿವರ ಬಳಿ ಈ ಪ್ರದೇಶಗಳಿಗೆ ಭೇಟಿ ನೀಡುವಂತೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಹಾಗೂ ಮೀನುಗಾರ ಮುಖಂಡರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಶೀಘ್ರವೇ ಎಲ್ಲ ಪ್ರದೇಶಗಳಿಗೆ ಭೇಟಿಕೊಟ್ಟು ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮಗಳನ್ನು ಕೈಗೊಳ್ಳಗಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಹಂಗಾರಕಟ್ಟೆ ಜಟ್ಟಿ, ಕೋಡಿ ಬೆಂಗ್ರಿ- ಕೋಡಿ ಜಟ್ಟಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶಂಕರ್ ಬಂಗೇರ, ಕೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಂತೋನಿ ಡಿಸೋಜ, ರಾಜ್ಯ ಮೀನುಗಾರರ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ರಮೇಶ್ ತಿಂಗಳಾಯ ಕೋಡಿ ಬೆಂಗ್ರೆ, ಕೋಟ ಪರ್ಷಿಯನ್ ಮೀನುಗಾರರ ಪ್ರಾಥಮಿಕ ಸಂಘದ ನಿರ್ದೇಶಕರಾದ ನವೀನ್ ಕುಂದಾರ್ ಕೋಡಿ ಬೆಂಗ್ರಿ, ಮೀನುಗಾರರ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಮಾಜಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ದಿನೇಶ್ ಬಂಗೇರ ಗುಂಡ್ಮಿ, ಯಂಗ್ ಬಿ ಗ್ರೇಡ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕೆ ನೆಲ್ಲಿಬೆಟ್ಟು ಉಪಸ್ಥಿತರಿದ್ದರು.