ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ 23 ಮೊಬೈಲ್ ಮಂಜೂರಾಗಿದೆ. ತೀವ್ರ ನೆಟ್‍ವರ್ಕ್ ಸಮಸ್ಯೆ ಎದುರಿಸಿದ್ದ ಗ್ರಾಮಾಂತರ ಪ್ರದೇಶಗಳಿಗೆ ಮೊಬೈಲ್ ಟವರ್ ಮಂಜೂರಾಗಿದೆ.
ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ನಾಗರಮಕ್ಕಿ, ಬೈಂದೂರು ಗ್ರಾಮದ ಕಲ್ಮಕ್ಕಿ ಗಂಗನಾಡು, ಕಾಲ್ತೋಡು ಗ್ರಾಮದ ಬೊಳಂಬಳ್ಳಿ, ತಗ್ಗರ್ಸೆ ಗ್ರಾಮದ ಮೂಡಣಗದ್ದೆ, ಗೋಳಿಹೊಳೆ ಗ್ರಾಮದ ಚುಚ್ಚಿ, ಹಳ್ಳಿಹೊಳೆ ಗ್ರಾಮದ ಕುಂದ್ಲಬೈಲು, ಕುಂದಾಪುರ ತಾಲೂಕು ಇಡೂರು ಕುಂಜ್ಞಾಡಿ ಗ್ರಾಮದ ಕುಕ್ಕಡ, ಹೊಸೂರು ಗ್ರಾಮದ ಮರದಹಕ್ಲು, ಬೆಳ್ಳಾಲ ಗ್ರಾಮ ಉರುಬೈಲು, ಮಚ್ಚಟ್ಟು ಗ್ರಾಮದ ಹಂಚಿಕಟ್ಟೆ, ಬೆಳ್ಳಾಲ ಗ್ರಾಮದ ನಂದ್ರೋಳ್ಳಿ, ಕಮಲಶಿಲೆ ಗ್ರಾಮದ ಯಳಬೇರು, ಕಮಲಶಿಲೆ ಗ್ರಾಮದ ಆರ್ಗೊಡು, ಹೊಸಂಗಡಿ ಗ್ರಾಮದ ಬೆಚ್ಚಳ್ಳಿ, ತೊಂಬಟ್ಟು ಗ್ರಾಮದ ಮಾವಿನಕೊಡ್ಲು, ಹೊಸಂಗಡಿ ಗ್ರಾಮದ ಹೆಗ್ಗೊಡ್ಲು, ಸಿದ್ಧಾಪುರ ಗ್ರಾಮದ ಸೋಣಿ/ಮಾನಂಜೆ, ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಬಸ್ರಿಬೇರು, ಕೊಲ್ಲೂರು ಗ್ರಾಮದ ದಳಿ, ಯಡ್ತರೆ ಗ್ರಾಮದ ಹೊಸೂರು, ಹಳ್ಳಿಹೊಳೆ ಗ್ರಾಮದ ಕುಂದ್ಲಬೈಲು-ಇರಿಗೆ ಇಲ್ಲಿಗೆ ಮೊಬೈಲ್ ಟವರ್ ಮಂಜೂರಾತಿ ಆಗಿದೆ.