ಕೋಟ ಪಂಚವರ್ಣ ಸಂಸ್ಥೆಯ 169ನೇ ಪರಿಸರಸ್ನೇಹಿ ಅಭಿಯಾನ

0
276

ಕುಂದಾಪುರ ಮಿರರ್ ಸುದ್ದಿ…

ಕಾರ್ಕಡ- ಪರಿಸರ ಕಾಳಜಿ ಸಂಘಟನೆಗಳು ಇನ್ನಷ್ಟು ಹುಟ್ಟಿಕೊಳ್ಳಲಿ- ಕೆ.ತಾರಾನಾಥ ಹೊಳ್ಳ

ಕೋಟ: ಪರಿಸರ ಕಾಳಜಿಯ ಸಂಘಟನೆಗಳು ಗ್ರಾಮಗಳಲ್ಲಿ ಮತ್ತಷ್ಟು ಹುಟ್ಟಿಕೊಳ್ಳಬೇಕು ಆ ಮೂಲಕ ಪರಿಶುದ್ಧ ವಾತಾವರಣ ನಮ್ಮದಾಗಿಸುವಂತ್ತಾಗಲಿ ಎಂದು ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಭಿಪ್ರಾಯಪಟ್ಟರು.

ಭಾನುವಾರ ಕಾರ್ಕಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಠಾರದಲ್ಲಿ ಪಂಚವರ್ಣ ಯುವಕ ಮಂಡಲ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್, ಗಿಳಿಯಾರು ಯುವಕ ಮಂಡಲ, ಸಮುದ್ಯತಾ ಗ್ರೂಪ್, ಯಕ್ಷಸೌರಭ ಕಲಾರಂಗ ಕೋಟ, ಹಂದಟ್ಟು ಮಹಿಳಾ ಬಳಗದ ಸಹಯೋಗದಲ್ಲಿ ಪರಿಸರ ಸ್ನೇಹಿ ಅಭಿಯಾನಕ್ಕೆ 169ನೇ ವಾರದ ಸಂಭ್ರಮದ ಹಿನ್ನಲೆಯಲ್ಲಿ ಗೆಳೆಯರ ಬಳಗ ಕಾರ್ಕಡ ಹಾಗೂ ಕಾರ್ಕಡ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ಜಯಂಟ್ಸ್ ಗೂಪ್ ಬ್ರಹ್ಮಾವರ , ಗೀತಾನಂದ ಫೌಂಡೇಶನ್ ಕೊಡಮಾಡಿದ ಗಿಡಗಳ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜಮುಖಿ ಸಂಘಟನೆಗಳು ಸಾಕಷ್ಟು ಇದೆ ಆದರೆ ನಿರಂತರ ಕ್ರೀಯಾಶೀಲತೆ ಇರುವುದು ಕೆಲವಾರು ಅದರಲ್ಲಿ ಪಂಚವರ್ಣ ಸಂಸ್ಥೆ ಕಾರ್ಯವೈಕರಿ ನಿಜಕ್ಕೂ ಆಶಾದಾಯಕವಾಗಿದೆ. ಇಂಥಹ ಸಂಸ್ಥೆಗಳು ಪ್ರತಿ ಗ್ರಾಮದಲ್ಲಿ ಇದ್ದರೆ ಆ ಗ್ರಾಮಗಳು ಅಭಿವೃದ್ಧಿಯಲ್ಲಿ ಮುಂಚೂಣಿಗೆ ನಿಲ್ಲುವಯದರಲ್ಲಿ ಸಂಶಯವಿಲ್ಲ ಎಂದು ಪರಿಸರಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳು ಮತ್ತಷ್ಟು ಇಮ್ಮಡಿಗೊಳ್ಳಲಿ ಎಂದು ಶುಭಹಾರೈಸಿದರು.

Click Here

ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾಮಂಡಲದ ಕಾರ್ಯದರ್ಶಿ ಲಲಿತಾ ಗಿಳಿಯಾರು ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ,ಮೊಗವೀರ ಯುವ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್ ಸಂಜೀವ, ಗೆಳೆಯರ ಬಳಗ ಕಾರ್ಕಡ ಕಾರ್ಯದರ್ಶಿ ಶೀನ ಕೆ,ಕೋಶಾಧಿಕಾರಿ ಶಶಿಧರ ಮಯ್ಯ,ಸ್ನೇಹ ಫ್ರೆಂಡ್ಸ್ ನ ಮಂಜುನಾಥ್, ಕಾರ್ಕಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಿಬ್ಬಂದಿಗಳಾದ ಮಾಲತಿ, ವನಜ ,ಸ್ಥಳೀಯರಾದ ಅರುಣ್ ಆಚಾರ್, ಚಂದ್ರ ಆಚಾರ್, ಸುರೇಶ್ ಪೂಜಾರಿ ಕಾರ್ಕಡ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ, ಗಿರೀಜಾ ಪೂಜಾರಿ ಗಿಡ ವಿತರಿಸಿ ಪರಿಸರ ಜಾಗೃತಿ ನೀಡಿದರು.

ಕಾರ್ಕಡ ರಸ್ತೆ,ಸುತ್ತಮುತ್ತಲಿನ ಹಲವು ಮನೆಗಳಿಗೆ ತೆರಳಿ ಗಿಡ ನೆಟ್ಟು ಸಂಭ್ರಮಿಸಲಾಯಿತು.

Click Here

LEAVE A REPLY

Please enter your comment!
Please enter your name here