ಕೋಟದ ಶಾಂಭವೀ ಶಾಲೆಯಲ್ಲಿ ಎಲ್.ಕೆ.ಜಿ ತರಗತಿ ಆರಂಭ

0
261

ಮಕ್ಕಳ ಬುದ್ದಿ ಬೆಳವಣಿಗೆಗೆ ಪೂರ್ವತರಗತಿಗಳು ಸಹಕಾರಿ – ಡಾ.ಪ್ರಕಾಶ್.ಸಿ.ತೋಳಾರ್

ಕುಂದಾಪುರ ಮಿರರ್ ಸುದ್ದಿ…
ಕೋಟ: ಶತಮಾನ ಕಂಡ ಕಾರಂತರ ಮನೆತನದ ಶಾಲೆ ಮತ್ತೊಮ್ಮೆ ಮಕ್ಕಳಿಂದ ಸಂಭ್ರಮಿಸುವ ವಾತಾವರಣ ಸೃಷ್ಠಿಯಾಗಬೇಕು ಎಂದು ಕುಂದಾಪುರದ ಪ್ರಸಿದ್ಧ ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್ ಹೇಳಿದರು.

ಕೋಟದ ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಇಲ್ಲಿ ಎಲ್ ಕೆ.ಜಿ ತರಗತಿ ಆರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿ ಶಿಕ್ಷಣ ಪಡೆದವರು ವಿಶ್ವಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಅಂತಹ ಶಾಲೆ ಅಭಿವೃದ್ಧಿಗೊಳ್ಳಬೇಕು. ಕಾಲಕ್ಕೆ ಅನುಗುಣವಾಗಿ ಬದಲಾವಣೆ ಅತ್ಯಗತ್ಯವಾಗಿದೆ, ಶಿಕ್ಷಣದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಮಕ್ಕಳ ಬುದ್ದಿ ಬೆಳವಣಿಗೆಗೆ ಎಲ್.ಕೆ.ಜಿ ಪೂರಕವಾಗಿದೆ. ಪೂರ್ವ ತರಗತಿಯ ಮೂಲಕ ಮಕ್ಕಳ ಶೈಕ್ಷಣಿಕ ಬದುಕಿಗೆ ಮುನ್ನುಡಿ ಬರೆಯಲಿ ಎಂದರಲ್ಲದೆ ಪೋಷಕರು ಮಕ್ಕಳಿಂದ ಮೊಬೈಲ್ ಸೇರಿದಂತೆ ಇನ್ನಿತ ವಿಷಯಗಳಲ್ಲಿ ಜಾಗೃತಿ ವಹಿಸುವ ಅಗತ್ಯತೆಯನ್ನು ಮನಗಾಣಿಸಿದರು.

Click Here

ತರಗತಿ ಕೊಠಡಿಯನ್ನು ಕೋಟ ಕಾಶಿಮಠದ ವೇ.ಮೂ.ದೇವದತ್ತ ಭಟ್ಟ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪಿ.ನರಸಿಂಹ ಐತಾಳ್,ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ,ಶಾಲಾ ಆಡಳಿತ ಮಂಡಳಿಯ ಸಂಚಾಲಕ ಸಚಿನ್ ಕಾರಂತ್ ಉಪಸ್ಥಿತರಿದ್ದರು. ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಸದಾನಂದ ಪೂಜಾರಿ ಪ್ರಾಸ್ತಾವನೆಗೈದು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್ ನಿರೂಪಿಸಿದರು. ಹಳೇ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜಿ.ಸತೀಶ್ ಹೆಗ್ಡೆ ವಂದಿಸಿದರು.

Click Here

LEAVE A REPLY

Please enter your comment!
Please enter your name here