ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಹಡು ಪಾಂಡೇಶ್ವರ ಇದರ 11ನೇ ವರ್ಷದ ವಾರ್ಷಿಕ ಸಭೆ ಭಾನುವಾರ ಮೂಡಹಡು ಶಾಲಾ ವಠಾರದಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ, ಈ ಬಾರಿ ಗಣೇಶೋತ್ಸವದ ಕುರಿತು ಚರ್ಚೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ವಿಜಯ ಆಚಾರ್ಯ ಪಾಂಡೇಶ್ವರ, ಕಾರ್ಯದರ್ಶಿಯಾಗಿ ಆದರ್ಶ ಆಚಾರ್ಯ ಪಾಂಡೇಶ್ವರ, ರಾಕೇಶ್, ಜೊತೆ ಕಾರ್ಯದರ್ಶಿಗಳಾಗಿ, ಗೌರವಾಧ್ಯಕ್ಷರಾಗಿ ವಿ.ನಾರಾಯಣ ಆಚಾರ್ ಹಾಗೂ ಕೆ.ವಿ ರಮೇಶ್ ರಾವ್, ರವಿ ಪೂಜಾರಿ,
ಪ್ರಥಮ ಬಾರಿಗೆ ಮಹಿಳೆಯಾಗಿ ಅಮ್ರತಾ, ಮಮತಾ ಅವಕಾಶ ಕಲ್ಪಿಸಿ ಆಯ್ಕೆಮಾಡಲಾಯಿತು.
ಶ್ರೀಷ ಆಚಾರ್ಯ ಸ್ವಾಗತಿಸಿದರು. ವಾರ್ಷಿಕ ವರದಿ ಸುದರ್ಶನ ಪೂಜಾರಿ ಮಂಡಿಸಿ ವಂದಿಸಿದರು.