ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ (CBSE) ಕೋಡಿ : ಶಿಕ್ಷಕ – ರಕ್ಷಕ ಸಭೆ

0
447

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ (CBSE) ಕೋಡಿ ಇಲ್ಲಿ ಶೈಕ್ಷಣಿಕ ವರ್ಷ 2023 – 24 ರ ಪ್ರಥಮ ಶಿಕ್ಷಕ ರಕ್ಷಕ ಸಭೆಯು ಶನಿವಾರದಂದು ಹಮ್ಮಿಕೊಳ್ಳಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಕೆ. ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಯವರು ವಹಿಸಿಕೊಂಡಿದ್ದರು. ಪ್ರಾಂಶುಪಾಲರಾದ ಅಶ್ವಿನಿ ಶೆಟ್ಟಿ ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಯ ಕುರಿತಂತೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಂಪನ್ಮೂಲ ವ್ಯಕ್ತಿ ಸೌಜನ್ಯ ಶೆಟ್ಟಿ ಕೌನ್ಸಿಲರ್ ಹಾಗೂ ಆಡಳಿತ ಅಧಿಕಾರಿ,ಡಾ. ಎ. ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆ ಉಡುಪಿ,ಇವರು ಪೋಷಕರನ್ನು ಉದ್ದೇಶಿಸಿ “ಮಕ್ಕಳ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ ಕುರಿತು ಮಹತ್ವದ ಮಾಹಿತಿ ಯನ್ನು ನೀಡಿದರು”.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಸೈಯದ್ ಮೊಹಮ್ಮದ್ ಬ್ಯಾರಿಯವರು “ಬದಲಾಗುತ್ತಿರುವ ಈ ಜಗತ್ತಿನಲ್ಲಿ ಬದುಕು ಸಾರ್ಥಕತೆಯ ಕಡೆಗೆ ಸಾಗಬೇಕಾದರೆ ಸೃಷ್ಟಿ ಹಾಗೂ ಸೃಷ್ಟಿ ಕರ್ತನ ಅನುಬಂಧ ಬಹಳ ಪ್ರಮುಖವಾದದ್ದು. ಒಂದು ಶಿಕ್ಷಣ ಸಂಸ್ಥೆಗೆ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಇವು ನಾಲ್ಕು ಆಧಾರ ಸ್ಥಂಭಗಳಿದ್ದಂತೆ.ಇವುಗಳೆಲ್ಲವುದರ ಸಹಭಾಗಿತ್ವದಿಂದ ಮಾತ್ರ ಒಂದು ಉತ್ತಮ ಶಿಕ್ಷಣ ಸಂಸ್ಥೆ ರೂಪುಗೊಳ್ಳುತ್ತದೆ “ಎಂಬ ಸಂದೇಶ ವನ್ನು ನೀಡಿದರು.

Click Here

ಶಾಲಾ ವಿದ್ಯಾರ್ಥಿ ಗಳ ತಂಡ ಶಾಲೆ ಹಾಗೂ ಗುರಿವಿನ ಮಹತ್ವವನ್ನು ಸಾರುವ ನೃತ್ಯವನ್ನು ಪ್ರದರ್ಶಿಸಿದರು. ಸಭೆಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ.ಆಸಿಫ್ ಬ್ಯಾರಿ ,ಸಂಯೋಜಕರಾದ ಆಕಾಶ್ ಹಾಗು ಎಲ್ಲಾ ವಿಭಾಗಳ ಪ್ರಾಂಶುಪಾಲರು, ಶಿಕ್ಷಕ – ರಕ್ಷಕ ಸಂಘದ ಮುಖ್ಯಸಲಹೆಗಾರರಾದ ಹಾಜಿ ಅಬುಷೇಕ್ ಸಾಹೇಬ್ ಹಾಗು ಪದಾಧಿಕಾರಿಗಳು ಮತ್ತು ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ಸಹ ಶಿಕ್ಷಕಿಯರಾದ ಜೆನಿಫರ್ ರವರು ಸ್ವಾಗತಿಸಿ, ಸಂಗೀತ ವಂದಿಸಿದರು,ಎಲಿಟರವರು ಕಾರ್ಯಕ್ರಮವನ್ನು ನಿರೂಪಿಸಿದರು.

 

LEAVE A REPLY

Please enter your comment!
Please enter your name here