ಕುಂದಾಪುರ ಮಿರರ್ ಸುದ್ದಿ…
ಕೋಟ: ರಾಜ್ಯದ ಬಂದರು ಹಾಗೂ ಮೀನುಗಾರಿಕಾ ಸಚಿವ ಮಂಕಾಳ ಎಸ್ ವೈದ್ಯ ಇವರು ಭಾನುವಾರ ಹಂಗಾರಕಟ್ಟೆ ಬಂದರು ಪ್ರದೇಶಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಹಂಗಾರಕಟ್ಟೆ ಬಂದರು ಅಭಿವೃದ್ಧಿ ಸಮಿತಿಯಿಂದ ಬಂದರು ಅಭಿವೃದ್ಧಿ ಪಡಿಸುವ ಕುರಿತು ಮನವಿ ನೀಡಿತು. ಮೀನುಗಾರರನ್ನು ಉದ್ದೇಶಿಸಿ ಮಾತನಾಡಿ ರಾಜ್ಯದ ಮೀನುಗಾರಿಕಾ ಸಚಿವನಾಗಿ ಈ ಹಂಗಾರಕಟ್ಟೆ ಬಂದರು ಪ್ರದೇಶವನ್ನು ಮೀನುಗಾರರ ವ್ಯವಸ್ಥೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮೀನುಗಾರರಿಗೆ ಭರವಸೆಯನ್ನು ನೀಡಿದರು.
ಹಂಗಾರಕಟ್ಟೆ ಬಂದರು ಅಭಿವೃದ್ಧಿ ಸಮಿತಿ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.
ಈ ವೇಳೆ ನಾಡೋಜ ಡಾ.ಜಿ ಶಂಕರ್ ಮೀನುಗಾರರ ಪರವಾಗಿ ಪ್ರಾಸ್ತಾವನೆ ಸಲ್ಲಿಸಿದರು. ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ, ಕೋಟ ಕಂದಾಯ ಅಧಿಕಾರಿ ಶಿವರಾಜ್, ಮೀನುಗಾರ ಮುಖಂಡರಾದ ಆನಂದ್ ಸಿ ಕುಂದರ್, ರಾಜೇಂದ್ರ ಸುವರ್ಣ, ಕೇಶವ ಕುಂದರ್, ರಾಜು ಬಂಗೇರ, ಚಂದ್ತ ಕಾಂಚನ್, ಬಂದರು ಅಭಿವೃದ್ಧಿ ಸಮಿತಿಯ ಪ್ರಮುಖರು, ಮೀನುಗಾರಿಕಾ ಇಲಾಖಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.