ಹಂಗಳೂರು ಲಯನ್ಸ್ ಕ್ಲಬ್-ನ 27ನೇ ಪದಗ್ರಹಣ ಸಮಾರಂಭ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:ಯಾವುದೇ ಸಂಘಟನೆಯ ಸ್ಥಾಪನೆಯ ಹಿಂದೆ ಸಮಾಜದ ಅಭಿವೃದ್ಧಿಯ ದೃಷ್ಟಿಕೋನ ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ಪಾಲಿಸಿದರೆ ಸಂಘಟನೆಯ ಉದ್ಧೇಶ ಸಾರ್ಥಕವಾಗುತ್ತದೆ ಎಂದು ಉದ್ಯಮಿ, ಜಿ.ಎಂ.ಟಿ. ಮುಖ್ಯ ಸಂಯೋಜಕ ಬಿ. ಅರುಣ್ ಕುಮಾರ್ ಹೆಗ್ಡೆ ಹೇಳಿದರು.
ಅವರು ಶನಿವಾರ ಸಂಜೆ ಕುಂದಾಫುರದ ಶೆರೋನ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಹಂಗಳೂರು ಲಯನ್ಸ್ ಕ್ಲಬ್-ನ 27ನೇ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪದಗ್ರಹಣ ಸಂದರ್ಭ ನಿಕಟ ಪೂರ್ವ ಅಧ್ಯಕ್ಷರಾದ ಉದ್ಯಮಿ, ಗುತ್ತಿಗೆದಾರ ರಜತ್ ಹೆಗ್ಡೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಲ್ಪ್ರೆಡ್ ಮಿನೇಜಸ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ನೂತನ ಕಾರ್ಯದರ್ಶಿಗಳಾದ ಜಿ.ಎಂ.ಹನೀಫ್, ಕೋಶಾಧಿಕಾರಿ ಕೆ. ರಮೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾಗಿ ನಿಕಟಪೂರ್ವ ಕೋಶಾಧಿಕಾರಿ ರೋವನ್ ಡಿಕೋಸ್ತಾ, ರೀಟಾ ಕ್ವಾಡ್ರಸ್ ಇದ್ದರು.
ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಕೋಣಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ದೃಶ್ಯ, ವಡೇರಹೋಬಳಿ ಹೈಸ್ಕೂಲಿನ ವಿಶ್ವಾಸ, ಮಣೂರಿನ ಪ್ರಥಮೇಶ್ ಆಚಾರ್, ಕುಂದಾಪುರ ಬೋರ್ಡ್ ಹೈಸ್ಕೂಲಿನ ಭೂಮಿಕಾ, ಸರ್ಕಾರೀ ಪದವಿ ಪೂರ್ವ ಕಾಲೇಜಿನ ರಾಹುಲ್, ನಿಸರ್ಗ ಪೂಜಾರಿ, ಶಾರಿಕಾ, ಬಿ.ಇ. ಓದುತ್ತಿರುವ ಪನ್ನಗ ಮಯ್ಯ ಮೊದಲಾದವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಶ್ರೀಲಹರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಪ್ರಾಂಶುಪಾಲ ಹೆಚ್. ಬಾಲಕೃಷ್ಣ ಶೆಟ್ಟಿ ಹೊಸಮನೆ ವಿದ್ಯಾರ್ಥಿಗಳ ಹೆಸರು ಓದಿದರು.