ಕುಂದಾಪುರ :ಆದಿವಾಸಿಗಳಿಗೆ ಬಜೆಟ್ ನಲ್ಲಿ ಅವಕಾಶ: ಆದಿವಾಸಿಗಳ ಸಂಘಟನೆ ಸ್ವಾಗತ

0
163

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಆದಿವಾಸಿಗಳಿಗೆ ನೀಡಲಾದ ಪ್ರಾದಾನ್ಯತೆ ಕುರಿತು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ವಿಮರ್ಶಾತ್ಮಕವಾಗಿ ಸ್ವಾಗತಿಸಿದೆ.

ಆದಿವಾಸಿಗಳ ಮುಖ್ಯ ಬೇಡಿಕೆಯಾದ ಎಸ್.ಸಿ.ಪಿ ಮತ್ತು ಟಿ.ಎಸ್. ಪಿ.ಉಪಯೋಜನೆಗೆ ಸಂಬಂಧಿಸಿದ ಕಾಯ್ದೆಯ 7- ಡಿ ಪರಿಚ್ಛೇದವನ್ನು ಕೈ ಬಿಟ್ಟಿರುವುದು ಸ್ವಾಗತಾರ್ಹ ಎಂದಿರುವ ಸಂಘಟನೆ, ದಲಿತ-ಬುಡಕಟ್ಟು ಉಪ ಯೋಜನೆ-ಎಸ್. ಸಿ.ಪಿ ಮತ್ತು ಟಿ.ಎಸ್. ಪಿ.ಗೆ 34,294 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು ಅದರ ಸದುಪಯೋಗವಾಗುವಂತೆ ಸರ್ಕಾರವು ಸಮುದಾಯಗಳ ಪ್ರತಿನಿಧಿಗಳು, ಸಂಘಟನೆಗಳೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಸಂಘಟನೆಯ ಅಧ್ಯಕ್ಷ ಶ್ರೀಧರ ನಾಡಾ ಹೇಳಿದ್ದಾರೆ. ಆದಿವಾಸಿಗಳಿಗೆ ನೀಡಲಾಗುತ್ತಿದ್ದ ಪೌಷ್ಠಿಕ ಆಹಾರವನ್ನು 6 ತಿಂಗಳಿನಿಂದ 12 ತಿಂಗಳಿಗೆ ವಿಸ್ತರಿಸಲಾಗಿದೆ. ಆಹಾರ ಗುಣಮಟ್ಟ‌ ಮತ್ತು ಲಭ್ಯತೆಯ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

Click Here

ಅರಣ್ಯ ಹಕ್ಕುಗಳ ಕಾಯ್ದೆ 2006ರಂತೆ ಭೂಮಿ, ಅರಣ್ಯ, ಸಮುದಾಯ ಹಕ್ಕುಗಳು ದಕ್ಕುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭೂಮಿ ಖರೀದಿ, ನಿವೇಶನ, ಮನೆ ನಿರ್ಮಾಣಕ್ಕೆ ಅನುದಾನವನ್ನು ಹೆಚ್ಚಿಸಬೇಕು.

ಜಿಲ್ಲೆಯಲ್ಲಿ ಸುಮಾರು 210 ಕ್ಕೂ ಕಡಿಮೆ ಕುಟುಂಬಗಳು ಇರುವ ಹಸಲ ಸಮುದಾಯದ ಅಭಿವೃದ್ಧಿಗೆ ಕ್ರಮವಹಿಸಬೇಕು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇವರಿಗೆ ಹಸಲರು ಪರಿಶಿಷ್ಟ ಪಂಗಡ ST ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಹಸಲ ಪರಿಶಿಷ್ಟ ಜಾತಿ SC ಪ್ರಮಾಣ ಪತ್ರ ನೀಡಲಾಗಿದೆ. ಇದರಿಂದ ಅವರಿಗೆ ಅರಣ್ಯ ಹಕ್ಕು, ಪೌಷ್ಟಿಕ ಆಹಾರ, ಸೂಕ್ಷ್ಮ ಬುಡಕಟ್ಟು ಸಮುದಾಯಗಳಿಗೆ ಸಿಗುವ ವಸತಿ, ಸ್ವಯಂ ಉದ್ಯೋಗ ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಗುಡ್ಡಾಗಾಡು ಪ್ರದೇಶದಲ್ಲಿ ವಾಸಿಸುವ ಅವರು ನೈಸರ್ಗಿಕವಾಗಿ ದೈಹಿಕ ಕುಬ್ಜತೆಗಳು ಉದ್ಯೋಗ ಸಂದರ್ಭದಲ್ಲಿ ಅವರಿಗೆ ಸಿಗಬೇಕಾದ ರಿಯಾಯಿತಿಗಳು ಸಿಗುತ್ತಿಲ್ಲ. ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಹಸಲರು ಮತ್ತು ಮರಾಠಿ ಸಮುದಾಯಗಳಿಗೆ ಅವರ ಭೂಮಿಯ ಹಕ್ಕುಗಳು ಸಿಕ್ಕಿಲ್ಲ. ಅವರು ವಾಸಿಸುವ ಭೂಮಿ ಕಂದಾಯವೋ, ಅರಣ್ಯಭೂಮಿಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರಿಂದ ಭೂಮಿ ಹಕ್ಕುಗಳು ಪಡೆಯಲು ಸಾಧ್ಯವಾಗುತ್ತಿಲ್ಲ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಾಸಿಸುವ ಆದಿವಾಸಿಗಳ ಪ್ರದೇಶದಲ್ಲಿ ಜಿಲ್ಲೆಯ ಗಡಿ ಗುರುತುಗಳ ಸಮಸ್ಯೆಗಳಿವೆ. ಹಳ್ಳಿಹೊಳೆ ಕಟ್ಟಿನಾಡಿ ಪ್ರದೇಶ ಶಿವಮೊಗ್ಗ, ಉಡುಪಿ ಜಿಲ್ಲೆಯ ಗಡಿಯ ಕುರಿತು ನಿಖರತೆ ಇಲ್ಲದೆ ಎರಡು ಜಿಲ್ಲೆಯ ಜಿಲ್ಲಾಡಳಿತ ಇವರನ್ನು ಭೂಮಿ ಹಕ್ಕಿನಿಂದ ವಂಚಿತರಾಗಿ ಮಾಡಿದೆ. ಮಹಮ್ಮದ್ ಪೀರ್ ವರದಿ ಪ್ರಕಾರ ಜಿಲ್ಲೆಯ ಕೊರಗ ಸಮುದಾಯದ ಕುಟುಂಬಗಳಿಗೆ ಭೂಮಿಯನ್ನು ನೀಡಲು ಕ್ರಮ ವಹಿಸಬೇಕು. ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಹಾಸ್ಟೆಲ್ ಗಳ ಅವ್ಯವಸ್ಥೆ ಸರಿಪಡಿಸಬೇಕು. ನಿರ್ಮಾಣ ಹಂತದಲ್ಲಿರುವ ಹೊಸ ಹಾಸ್ಟೆಲ್ ಗಳು ಕೂಡಲೇ ವಿದ್ಯಾರ್ಥಿಗಳ ಉಪಯೋಗಕ್ಕೆ ಸಿಗುವಂತೆ ಆಗಬೇಕು.

ಈದೆಸೆಯಲ್ಲಿ ಸರಕಾರವು ಸಮುದಾಯಗಳು, ಸಂಘಟನೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೂಡಲೇ ಕರೆಯ ಬೇಕೆಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here