ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕುಂದೇಶ್ವರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ ಸಿಎಸ್/ ಸಿಎಮ್ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ ನಡೆಸಿದ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಭಾರತಕ್ಕೆ 29ನೇ ರ್ಯಾಂಕ್ ಪಡೆದ ವೈಷ್ಣವಿ ಎಂ ವಿ ಅವರನ್ನು ಸನ್ಮಾನಿಸಲಾಯಿತು.
ಅತ್ಯಂತ ಕಠಿಣ ಪಠ್ಯಕ್ರಮ ಪರೀಕ್ಷೆಯಲ್ಲೊಂದಾದ ಸಿಎ ಪರೀಕ್ಷೆಯಲ್ಲಿ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಇಂತಹ ಸಾಧನೆ ಮೆಚ್ಚುವಂತದ್ದು. ಪರೀಕ್ಷೆ ತೇರ್ಗಡೆ ಹೊಂದುವುದೇ ಕಬ್ಬಿಣದ ಕಡಲೆಯಾಗಿರುವ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 29ನೇ ರ್ಯಾಂಕ್ ಪಡೆಯುವುದು ನಮ್ಮ ಪರಿಸರದ ಅನೇಕ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗಲಿದೆ ಎಂದು ಶಿಕ್ಷ ಪ್ರಭಾ ಸಂಸ್ಥೆಯ ನಿರ್ದೇಶಕರಾಗಿರುವ ಪ್ರತಾಪ್ ಚಂದ್ರ ಶೆಟ್ಟಿ ಅವರು ನುಡಿದರು.
ಸಿಎ ಎಲ್ಲಾ ಹಂತದ ಪರೀಕ್ಷೆಯಲ್ಲಿ ಉತ್ತಮ ಸಾಧನೆ:-
ಗ್ರಾಮೀಣ ಪ್ರದೇಶದಲ್ಲಿ ಪ್ರೊಫೆಷನಲ್ ಕೋರ್ಸ್ಗಳಿಗೆ ರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ತರಬೇತಿಯನ್ನು ನೀಡಬೇಕು ಎನ್ನುವ ಹಂಬಲದೊಂದಿಗೆ ಪ್ರಾರಂಭಗೊಂಡ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಷನ್ ಸಂಸ್ಥೆಯು ಕೊರೋನಾ ಸಂದರ್ಭದಲ್ಲೂ ಕೂಡ ಸಿಎ ಫೌಂಡೇಶನ್, ಇಂಟರ್ಮೀಡಿಯೇಟ್ ಮತ್ತು ಫೈನಲ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಸಂಸ್ಥೆಯ ಸಿಎ ಫೌಂಡೇಶನ್ನ 41 ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಅನುಷ್ಕ ಎ. ಕುಂದರ್ – 332, ಅಭಿಷೇಕ್ ಡಿ. 302, ಕಿರಣ್ ಕಾಮತ್ 299, ಆದಿತ್ಯ ದೇವಾಡಿಗ 298, ಜೆಸ್ವಿತಾ ಡಿ. 284, ರಾಮನಾಥ ಶೆಣೈ 282, ಸುಪ್ರೀತಾ 274, ಶ್ರೇಯಾ ಭಟ್, 268, ರೋಹನ್ ಶೆಟ್ಟಿ 266, ಅಭಿಶ್ರೀ 263, ಮಂದಾರ 260, ಭುವನ್ ರಾಜ್ ಶೆಟ್ಟಿ 252, ಹರೀಶ್ ನಾಯಕ್ 248, ವಿಖ್ಯಾತ್ 248, ಚೇತನಾ 245, ರವಿಕಿರಣ್ 245, ಅಮೃತಾ ಕೆ. 243, ನಾದಶ್ರೀ 240, ಶ್ರೀಷನ್ ಶೆಟ್ಟಿ 240, ರಾಘವೇಂದ್ರ ಪೂಜಾರಿ 238, ಅಕ್ಷಿತಾ 234, ದೀಕ್ಷಾ ಶಾನುಭಾಗ್ 229, ಮನೀಷ್ ಕೋಟ 226, ಸಿಂಚನಾ 226, ವಿಜೇಂದ್ರ ಕಿಣಿ 224, ಸಹನಾ ಎಸ್. 223, ಶಮಂತ್ ಕೊಠಾರಿ 223, ಶಾಂಭವಿ ಬಂಗೇರ 222, ಆಹಿಷ್ ಶೆಟ್ಟಿ 216, ಪ್ರಿಯಾ ಶೆಟ್ಟಿ 215, ಶ್ರೀಮಾ ಶೆಟ್ಟಿ 215, ಅಕ್ಷತಾ 214, ಸ್ನೇಹಾ 214, ಅಕ್ಷತಾ ಟಿ. 209, ಅನುಷಾ 208, ಅರ್ಪಣ್ ಪೂಜಾರಿ 207, ಗ್ಲೇವಿಟ 208, ವೈಷ್ಣವಿ ಶೆಟ್ಟಿ 204, ಮನೋಜ್ 202, ಚಿರಾಗ್ ಶೆಟ್ಟಿ 201, ಇಂಚರಾ 201 .
ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಗೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಪರೀಕ್ಷೆಯಲ್ಲಿ ಒಂದು ರಾಷ್ಟ್ರೀಯ ಮಟ್ಟದ ರ್ಯಾಂಕ್ ಅನ್ನು ಒಳಗೊಂಡಂತೆ 15 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ ಸಂಸ್ಥೆಯ ವಿದ್ಯಾರ್ಥಿಗಳಾದ ರಕ್ಷಿತ್ ಶೆಟ್ಟಿ 246, ಸಿಂಚನ ಶೆಟ್ಟಿ 239, ಸುದರ್ಶನ್ ಅಡಿಗ 232, ಸುಚಿನ್ ಕುಮಾರ್ ಶೆಟ್ಟಿ 228, ಗಣೇಶ್ 213, ಅಖಿಲ ಹೆಬ್ಬಾರ್210, ಸಹನಾ 206, ಆಯೆಷ ತುಬಾ 203, ಭೂಮಿಕ 202, ಮೈತ್ರಿ 201 ಹೊಸ ಪಠ್ಯಕ್ರಮದ ಇಂಟರ್ಮೀಡಿಯೇಟ್ ಪರೀಕ್ಷೆ ಉತ್ತೀರ್ಣರಾದರೆ, ರೋಹನ್ 178, ಮೇಘರಾಜ್ 150, ಹಳೆ ಪಠ್ಯಕ್ರಮದ ಇಂಟರ್ಮೀಡಿಯೇಟ್ ಪರೀಕ್ಷೆಯನ್ನು ಉತ್ತೀರ್ಣರಾಗಿರುತ್ತಾರೆ.
ಸಿಎ ಅಂತಿಮ ಪರೀಕ್ಷೆಯಲ್ಲಿ ವಿಲಾಸ್ ಶೆಟ್ಟಿ 528 ಅಂಕ ಗಳಿಸುವುದರೊಂದಿಗೆ ಅಂತಿಮ ಹಂತದ ಎರಡು ಗ್ರೂಪ್ ಪರೀಕ್ಷೆ ಅನ್ನು ಏಕಕಾಲದಲ್ಲಿ ಪೂರ್ಣಗೊಳಿಸಿ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ. ಸಂಸ್ಥೆಯ ಇನ್ನೊರ್ವ್ ವಿದ್ಯಾರ್ಥಿ ಪುನೀತ್ ಶೆಟ್ಟಿ ಸಿಎ ಅಂತಿಮ ಪರೀಕ್ಷೆಯ ಗ್ರೂಪ್ 1ರಲ್ಲಿ 215 ಅಂಕ ಗಳಿಸುವುದರೊಂದಿಗೆ ಅಂತಿಮ ಹಂತದ ಮೊದಲನೇ ಗ್ರೂಪ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಬೋಧಕ ಸಿಬ್ಬಂದಿಗಳ ಪ್ರಯತ್ನ ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಕಾರಣ ಎಂದು ಸಂಸ್ಥೆಯ ಮುಖ್ಯಸ್ಥರಾದ ಭರತ್ ಶೆಟ್ಟಿ ಹೇಳಿದರು.
ದೇಶದಾದ್ಯಂತ ಬಹುಬೇಡಿಕೆ ಇರುವಂತಹ ಕೋರ್ಸ್ ಗಳಾದ ಸಿ ಎ ಮತ್ತು ಸಿ ಎಸ್ ಕೋರ್ಸ್ ಗಳಿಗೆ ಮೆಟ್ರೋಪಾಲಿಟನ್ ನಗರಗಳಾದ ಮುಂಬೈ, ಬೆಂಗಳೂರು, ಚೆನ್ನೈಗಳಲ್ಲಿ ಗುಣಮಟ್ಟದ ತರಬೇತಿಗಳು ದೊರೆಯುತ್ತದೆ. ಕುಂದಾಪುರದ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿಯ ಸಾಧನೆ ಎಲ್ಲರೂ ಮೆಚ್ಚುವಂತದ್ದು. ಶಿಕ್ಷ ಪ್ರಭಾ ಅಕಾಡೆಮಿಯ ಮೂಲಕ ಅನೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಮತ್ತು ಅನೇಕ ವಿದ್ಯಾರ್ಥಿಗಳು ಈ ಸಂಸ್ಥೆಯ ಮೂಲಕ ತಮ್ಮ ಭವಿಷ್ಯ ಉಜ್ವಲವಾಗಿ ರೂಪಿಸಿಕೊಳ್ಳಲಿ ಎಂದು ಶಿಕ್ಷ ಪ್ರಭಾ ಅಕಾಡೆಮಿಯ ಅಂಗಸಂಸ್ಥೆ ಸುಜ್ಞಾನ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅವರು ಹೇಳಿದರು.
ವಿದ್ಯಾರ್ಥಿನಿಗೆ 50000 ರೂ. ಪುರಸ್ಕಾರ
ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಅಖಿಲ ಭಾರತಕ್ಕೆ 21ನೇ ರ್ಯಾಂಕ್ ಮತ್ತು ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅಖಿಲ ಭಾರತಕ್ಕೆ 29ನೇ ರ್ಯಾಂಕ್ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಅವರಿಗೆ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಷನ್ ಸಂಸ್ಥೆಯ ವತಿಯಿಂದ ಐವತ್ತು ಸಾವಿರ ಬಹುಮಾನವನ್ನು ಸಂಸ್ಥೆಯ ಸಂಸ್ಥಾಪಕರು ಗಳಾದ ಪ್ರತಾಪಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಮತ್ತು ಸುಜ್ಞಾನ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅವರು ವಿತರಿಸಿದರು.