ಮಕ್ಕಳ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು – ಡಾ.ಉಷಾ ಹೇಮಂತ್
ಕುಂದಾಪುರ ಮಿರರ್ ಸುದ್ದಿ…
ಕೋಟ: ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಆಗ ಮಾತ್ರ ತಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿಸಲು ಸಾಧ್ಯವಿದೆ ಎಂದು ಸಾಸ್ತಾನದ ಪ್ರಸಿದ್ಧ ವೈದ್ಯೆ ಡಾ.ಉಷಾ ಹೇಮಂತ್ ಹೇಳಿದರು.
ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ಅರಿವು ನಿಮ್ಮಗಿರಲಿ ನೆರೆವು ಹದಿಹರೆಯದವರ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಸ್ತುತ ವಿದ್ಯಾಮಾನಗಳಲ್ಲಿ ಮಕ್ಕಳ ಬಗ್ಗೆ ಪೋಷಕರು ನಿರ್ಲಕ್ಷೀಯ ಧೋರಣೆಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿ ಮಕ್ಕಳು ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್ ,ಟಿವಿ ಇನ್ನಿತರ ವಿಚಾರಗಳಲ್ಲಿ ಸಾಕಷ್ಟು ಕ್ರಮಿಸಿ ಕೊಂಡಿದ್ದಾರೆ ,ಈ ಬೆಳವಣಿಗೆ ಮಾರಕವಾಗಿ ಪರಿಣಮಿಸಲಿದೆ. ಜಂಕ್ ಫುಡ್‍ಗಳ ಬಳಕೆಯಿಂದ ಎದುರಾಗುತ್ತಿರುವ ಇತರ ಸಮಸ್ಯೆಗಳ ಬಗ್ಗೆ ಮನದಟ್ಟಾಗುವ ರೀತಿಯಲ್ಲಿ ವಿವಿರಿಸಿದರು. ಹೆಣ್ಣು ಮಕ್ಕಳ ದೇಹದಲ್ಲಿ ಬದಲಾಗುವ ಬೆಳವಣಿಗೆಯ ಬಗ್ಗೆ ತಾತ್ಸಾರ ಸಲ್ಲ ,ಅದನ್ನು ಮನೆಯ ತಾಯಂದಿರರ ಬಳಿ ತೋಡಿ ಕೊಳ್ಳಿ ಇಲ್ಲ ವೈದ್ಯರ ಬಳಿ ಮಾಹಿತಿ ಪಡೆಯಿರಿ ಎಂದು ಸಭೆಯಲ್ಲಿ ತಿಳಿ ಹೇಳಿದರು.
ಕಾರ್ಯಕ್ರಮವನ್ನು ಕೋಟ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಯಶೋಧ ಹಂದೆ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಪುಷ್ಭಾ ಕೆ ಹಂದಟ್ಟು ಸ್ವಾಗತಿಸಿ, ಸದಸ್ಯೆ ಸುಜಾಯ ಬಾಯರಿ ನಿರೂಪಿಸಿ,ವಸಂತಿ ಹಂದಟ್ಟು ವಂದಿಸಿದರು.