ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೊಲ್ಲೂರು ವ್ಯಾಪ್ತಿಯ ನಾಗೋಡಿ ಸಮೀಪದ ಅರಿಶಿನ ಗುಂಡಿ ಜಲಪಾತದಲ್ಲಿ ಕಳೆದ ಭಾನುವಾರ ಕಾಲು ಜಾರಿ ನಾಪತ್ತೆಯಾಗಿದ್ದ ಯುವ ಉದ್ಯಮಿ ಶರತ್ ನ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಕಳೆದ ಒಂದು ವಾರದಿಂದ ಶರತ್‌ಗಾಗಿ ಶೋಧಕಾರ್ಯ ನಡೆಯುತ್ತಿತ್ತು. ಅರಿಶಿನ ಗುಂಡಿ ಜಲಪಾತದಿಂದ ಸುಮಾರು 200 ಮೀಟರ್ ಕೆಳಗಡೆ ಕಲ್ಲುಗಳ ನಡುವೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು ಮುಳುಗು ತಜ್ಞರು, ಎಸ್.ಡಿ.ಆರ್.ಎಫ್ ತಂಡ, ಕೋತಿರಾಜ್ ಯಾನೆ ಜ್ಯೋತಿರಾಜ್, ಮುಳುಗು ತಜ್ಞ ಈಶ್ವರ್ ಮಲ್ಪೆ ಮೊದಲಾದವರು ಕಳೆದ ಒಂದು ವಾರದಿಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿ ಹೊಳೆಯ ನೀರು ತಿಳಿಯಾದ ಬಳಿಕ ಶವ ಪತ್ತೆಯಾಗಿದೆ.
ಜುಲೈ 23ರಂದು ಭಾನುವಾರ ಶಿವಮೊಗ್ಗದ ಭದ್ರಾವತಿ ಮೂಲದ ಶರತ್ ಕುಮಾರ್ ಜಾಲು ಜಾರಿ ನಾಪತ್ತೆಯಾಗಿದ್ದರು. ಅವರು ಬೀಳುತ್ತಿರುವ ದೃಶ್ಯವನ್ನು ಆತನ ಸ್ನೇಹಿತ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.