ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬೈಂದೂರು ತಾಲೂಕಿನ ಉಪ್ಪುಂದ ಮಡಿಕಲ್ ನ ಕರ್ಕಿಕಳಿ ಎಂಬಲ್ಲಿ ಸೋಮವಾರ ಸಂಜೆ ದೋಣಿ ದುರಂತ ಸಂಭವಿಸಿದೆ. ನಾಡದೋಣಿಯಲ್ಲಿ ಮೀನು ಹಿಡಿದು ದಡಕ್ಕೆ ಬರುತ್ತಿದ್ದಾಗ ಸಮುದ್ರದ ಅಲೆಗೆ ಸಿಕ್ಕಿ ಸಚಿನ್ ಖಾರ್ವಿಯವರ ದೋಣಿ ಮುಳುಗಿದ್ದು ದೊಣಿಯಲ್ಲಿದ್ದ ನಾಗೇಶ್ (29) ಮೃತಪಟ್ಟವರು ಮತ್ತು ಸತೀಶ್ (31) ನೀರುಪಾಲಾದ ನತದೃಷ್ಟರು.
ಉಳಿದವರು ಈಜಿ ದಡ ಸೇರಿದ್ದಾರೆ ಎಂದು ಸ್ಥಳೀಯ ಮಾಹಿತಿ ಲಭಿಸಿದೆ. ಎಲ್ಲಾ ಮೀನುಗಾರರು ಉಪ್ಪುಂದ ಗ್ರಾಮದ ಕರ್ಕಿಕಳಿಯ ನಿವಾಸಿಯಾಗಿರುತ್ತಾರೆ.