ಕುಂದಾಪುರ ಮಿರರ್ ಸುದ್ದಿ…
ಕೋಟ: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಮೆ ಅಂಗನವಾಡಿ ಕೇಂದ್ರದಲ್ಲಿ ಸ್ತನಪಾನ ಸಪ್ತಾಹ ಕಾರ್ಯಕ್ರಮ ಮತ್ತು ದಾನಿಗಳು ಕೊಡ ಮಾಡಿದ ಸಮವಸ್ತ್ರ ವಿತರಣೆ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು.
ಆರೋಗ್ಯ ಕಾರ್ಯಕರ್ತೆ ಪೂಜಾ ಅವರು ಸ್ತನ್ಯಪಾನದ ಮಹತ್ವ ಮತ್ತು ಪೌಷ್ಟಿಕಾಂಶದ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.
ಸ್ಥಳೀಯರಾದ ಸೋಮ ಕಾಂಚನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಸವಿತಾ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘ ಸಹಿಪ್ರಾ ಶಾಲೆ ಕೊಮೆ ಇದರ ಅಧ್ಯಕ್ಷ ರಾಜು ಪೂಜಾರಿ, ಶಾಲೆಯ ಶಿಕ್ಷಕರಾದ ಸುಷ್ಮಾ ಶೆಟ್ಟಿ , ಯುವಕ ಮಂಡಲದ ಸದಸ್ಯರಾದ ವೈಕುಂಠ ,ಆಶಾ ಕಾರ್ಯಕರ್ತೆ ರತ್ನ ಅಂಗನವಾಡಿ ಸಹಾಯಕಿ ಶ್ವೇತ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಭಾರತ್ ಮಿನರಲ್ಸ್ ತೋಟದಬೆಟ್ಟು ಕೋಮೆ ಇವರು ಅಂಗನವಾಡಿ ವಿದ್ಯಾರ್ಥಿಗಳಿಗೆ ನೀಡಿದ ಸಮವಸ್ತ್ರವನ್ನು ವಿತರಿಸಿದರು. ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.