ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರದ ಆಶ್ರಯದಲ್ಲಿ ನಡೆಯುತ್ತಿರುವ ಇಂಟ್ರೇಕ್ಟ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ ಆ.5ರಂದು ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಮಿಡ್ ಟೌನ್ ನ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಕಾವ್ರಾಡಿ ವಹಿಸಿದರು. ಇಂಟ್ರೇಕ್ಟ ಚೇರ್ಮನ್ ಚಂದ್ರಶೇಖರ ಹೆಗ್ಡೆಯವರು ಮಾತನಾಡುತ್ತಾ ಶಾಲೆಯಲ್ಲಿ ಇಂಟ್ರೇಕ್ಟ ಕ್ಲಬ್ ವತಿಯಿಂದ ಏನೆಲ್ಲಾ ಹೊಸ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದೆಂದು ರೂಪುರೇಷೆಗಳ ಬಗ್ಗೆ ತಿಳಿಸಿದರು. ರೋಟೇರಿಯನ್ ರಂಜಿತ್ ಕುಮಾರ್ ಶೆಟ್ಟಿಯವರು ಶಾಲಾ ವಿದ್ಯಾರ್ಥಿಗಳು ಇಂಟ್ರೇಕ್ಟ ಕ್ಲಬ್ ಮೂಲಕ ನಾಯಕತ್ವ ಗುಣಗಳನ್ನು ಈಗಿಂದಲೇ ಬೆಳೆಸಿಕೊಳ್ಳಲು ಸಾಧ್ಯ ಎಂದರು.
ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರು ಮಾತನಾಡುತ್ತಾ ರೋಟರಿ ಮಿಡ್ ಟೌನ್ ಕುಂದಾಪುರ ಈಗಾಗಲೇ ಶಾಲೆಗೆ ನೀಡಿದ ಕೊಡುಗೆಯನ್ನು ನೆನಪಿಸಿ ಅಭಿನಂದಿಸಿದರು. ಈ ಸಾಲಿನ ವಿದ್ಯಾರ್ಥಿಗಳಿಗೆ ಗುರುತು ಚೀಟಿ ಮಾಡಿಸಿ ಕೊಡುವುದು ಹಾಗೂ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ತಗಲುವ ವೆಚ್ಚವನ್ನು ಸರಿದೂಗಿಸಲು ಆರ್ಥಿಕ ನೆರವುಗಳ ಬೇಡಿಕೆ ಇಟ್ಟರು. 2023-24ನೆಯ ಸಾಲಿನ ಇಂಟ್ರೇಕ್ಟ ಕ್ಲಬ್ ನ ಅಧ್ಯಕ್ಷನಾಗಿ ರಶ್ವಿನ್ 9ನೆಯ ತರಗತಿ ಹಾಗೂ ಶಾಂತಕುಮಾರಿ 9ನೆಯ ತರಗತಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿನ ಸಾಲಿನ ಕಾರ್ಯದರ್ಶಿ ದೀಕ್ಷಾ 10ನೆಯ ತರಗತಿ ಹಿಂದಿನ ಸಾಲಿನ ಇಂಟ್ರೇಕ್ಟ ಕ್ಲಬ್ ನ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದಳು. ನಿರ್ಗಮನ ಅಧ್ಯಕ್ಷ ಪ್ರವೀಣ್ 10ನೆಯ ತರಗತಿ ನಿರ್ಗಮನ ಭಾಷಣ ಮಾಡಿ , ಅಧಿಕಾರ ಹಸ್ತಾಂತರಿಸಿ ಪ್ರಸ್ತುತ ಸಾಲಿನ ಪದಾಧಿಕಾರಿಗಳಿಗೆ ಶುಭ ಹಾರೈಸಿದನು. ಅಧ್ಯಕ್ಷ ರಶ್ವಿನ್ ಪ್ರಸ್ತುತ ಸಾಲಿನ ಪದಾಧಿಕಾರಿಗಳಿಗೆ ಸಭೆಗೆ ಪರಿಚಯಿಸಿದನು.
ರೊ.ಸಂಪತ್ ಕುಮಾರ್ ಶೆಟ್ಟಿಯವರು ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಕ್ಲಬ್ ವತಿಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿ ಎಂದರು. ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿಯವರು ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಕಾರ್ಯದರ್ಶಿ ರೊ.ಸಚಿನ್ ಕುಮಾರ್ ಶೆಟ್ಟಿಯವರು ಧನ್ಯವಾದ ಅರ್ಪಿಸಿದರು. ಇಂಟ್ರೇಕ್ಟ ಕೋರ್ಡಿನೇಟರ್ ದಿನೇಶ್ ಪ್ರಭು ಸರ್ವರನ್ನು ಸ್ವಾಗತಿಸಿದ್ದರು.