ಕುಂದಾಪುರ ಮಿರರ್ ಸುದ್ದಿ….
ಕುಂದಾಪುರ : ಕಾವ್ರಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪಕ್ರಿಯೆ ಶುಕ್ರವಾರ ಬೆಳಿಗ್ಗೆ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಸದಾನಂದ ಮೊಗವೀರ ಬಳ್ಕೂರು ಹಾಗೂ ಉಪಾಧ್ಯಕ್ಷರಾಗಿ ಭಾಸ್ಕರ್ ಶೆಟ್ಟಿ ಆಯ್ಕೆಯಾದರು.
ಆಡಳಿತ ಮಂಡಳಿಗೆ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಆರು ಸ್ಥಾನಗಳನ್ನು ಕಾಂಗ್ರೆಸ್, ಏಳು ಸ್ಥಾನಗಳು ಬಿಜೆಪಿ ಬೆಂಬಲಿತರು
ಸುಧಾಕರ ನಾಯಕ್, ಕೃಷ್ಣರಾಜ ಬಿ., ಸಂದೇಶ ಕುಮಾರ ಶೆಟ್ಟಿ, ಕಾಮರಾಜ ಶೆಟ್ಟಿ ಹಳ್ಳಾಡು, ಚಂದ್ರಶೇಖರ ಹೆಗ್ಡೆ, ಕೃಷ್ಣ ಗಾಣಿಗ, ದೇವಾನಂದ ಶೆಟ್ಟಿ, ಪೂರ್ಣಿಮಾ, ಜ್ಯೋತಿ ವಿ ಪುತ್ರನ್, ಚಂದ್ರ ಕೆ, ಸುರೇಶ ಕುಮಾರ್ ನಿರ್ದೇಶಕರಾಗಿ ಆಯ್ಕೆಯಾದರು.
ಸಹಕಾರಿ ಇಲಾಖೆಯ ಜ್ಯೋತಿ ಡಿ. ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.