ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಕ ವರ್ಗ ಹೋರಾಟಗಳನ್ನು ನಡೆಸಿದೆ ಅದರ ಪ್ರತಿಫಲ ನ್ಯಾಯ ಬದ್ಧವಾಗಿ ಸಿಗಬೇಕು. ಸ್ವಾತಂತ್ರ್ಯ ನಂತರ ಪಡೆದ 44 ಕಾರ್ಮಿಕ ಕಾನೂನುಗಳು 2020 ಕೋವಿಡ್ ಸಂದರ್ಭದಲ್ಲಿ 4 ಹೊಸ ಸಂಹಿತೆಗಳಾದ ವೇತನ ಸಂಹಿತೆ, ಕೈಗಾರಿಕೆ ಬಾಂಧವ್ಯಗಳ ಸಂಹಿತೆ, ಸಾಮಾಜಿಕ ಸುರಕ್ಷತಾ ಸಂಹಿತೆ, ವ್ರತ್ತಿ ಸುರಕ್ಷತೆ, ಉದ್ಯೋಗ ಸೇವಾ ಷರತ್ತುಗಳ ಸಂಹಿತೆ ತರಲಾಗಿದೆ. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ವ್ಯಾಪಕ ಹೋರಾಟ ಮುಷ್ಕರ ನಡೆಸಿದರೂ ಕೇಂದ್ರ ಸರ್ಕಾರ ಕಾರ್ಮಿಕ ಪರ ನಿಂತಿಲ್ಲ. ಶಾಸನ ಸಭೆಯಲ್ಲಿ ಈ ಕಾಯ್ದೆಗಳ ವಿರುದ್ಧ ಹೋರಾಡಿದ ಕಾರ್ಮಿಕರ ಸಂಸದರನ್ನು ಅಮಾನತು ಮಾಡಿ ಅಂಗೀಕರಿಸಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ರೈತರು ಕಾರ್ಮಿಕರು ಕೂಲಿಕಾರರ ಮುಂದಿನ ದಿನಗಳಲ್ಲಿ ದೇಶದಾದ್ಯಂತ ತೀವ್ರ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಅವರು ಸ್ವಾತಂತ್ರೋತ್ಸವದ ಅಂಗವಾಗಿ ಶ್ರಮಿಕರ ಪ್ರಚಾರಾಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಚಾರಾಂದೋಲನದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ್,ಜಿಲ್ಲಾ ಕಾರ್ಯದರ್ಶಿ ಎಚ್ ನರಸಿಂಹ,ಮಹಾಬಲ ವಡೇರಹೋಬಳಿ, ಬಲ್ಕೀಸ್, ಲಕ್ಷ್ಮಣ ಡಿ ಇದ್ದರು. ಪ್ರಚಾರಾಂದೋಲನದ ಚಂದ್ರಶೇಖರ ವಿ. ಸ್ವಾಗತಿಸಿದರು.