ಕುಂದಾಪುರ ಮಿರರ್ ಸುದ್ದಿ…
ಕೋಟ: ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಆ.9 ರಂದು ಖ್ಯಾತ ಚಿತ್ರ ನಟಿ ಮಾಲಾಶ್ರೀ ಹಾಗೂ ಪುತ್ರಿ ಶ್ರೀ ದೇವರ ದರ್ಶನ ಪಡೆದರು.
ಶ್ರೀ ದೇವಸ್ಥಾನದ ವತಿಯಿಂದ ಅವರನ್ನು ಪ್ರಸಾದ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ, ಹಿರಿಯ ಅರ್ಚಕ ಹಾಗೂ ಮಾಜಿ ಮೊಕ್ತೇಸರರಾದ ಕೆ ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಶ್ರೀಶ ಉಪಾಧ್ಯಾಯ, ಅರ್ಚಕ ಮಂಡಳಿ ಸದಸ್ಯರು, ದೇವಳದ ವ್ಯವಸ್ಥಾಪಕರು ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.