ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ಕನ್ನಡ ನಾಮಫಲಕವನ್ನು ಖಡ್ಡಾಯವಾಗಿ ಅಳವಡಿಸುವಂತೆ ಆಗ್ರಹಿಸಿ ಕುಂದಾಪುರದ ವಿಠಲವಾಡಿ ಕನ್ನಡಾಭಿಮಾನಿಗಳ ಸಮಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಕನ್ನಡ ಖಡ್ಡಾಯವಾಗಿದ್ದರೂ ಹೆಚ್ಚಿನ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಆಂಗ್ಲಭಾಷೆಯ ಹಾಗೂ ಇತರ ಭಾಷೆಯ ನಾಮಫಲಕಗಳನ್ನು ಅಳವಡಿಸಿದ್ದು ತಕ್ಷಣವೇ ಅಂದರೆ ಕನ್ನಡ ರಾಜ್ಯೋತ್ಸವಕ್ಕೆ ಮುಂಚಿತವಾಗಿ ಎಲ್ಲಾ ಅಂಗಡಿಗಳ ಮುಂಭಾಗದಲ್ಲಿ ಕನ್ನಡ ನಾಮಫಲಕವನ್ನು ಖಡ್ಡಾಯಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ಹೆಚ್ ಮಂಜುನಾಥ ಇವರಿಗೆ ಮನವಿ ನೀಡಲಾಯಿತು.
ಕನ್ನಡಾಭಿಮಾನಿಗಳ ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಸೋಮವಾರದಿಂದ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕನ್ನಡ ಅಭಿಮಾನಿಗಳ ಸಂಘದ ದಿನೇಶ ಪುತ್ರನ್ ವಿಠಲವಾಡಿ, ನಿತಿನ್ ವಿಠಲವಾಡಿ, ಹರ್ಷೀತ್ ವಿಠಲವಾಡಿ,ಪುರಸಭೆ ಸದಸ್ಯ ಗಿರೀಶ್ ಜಿ.ಕೆ,ಹಾಗೂ ಕನ್ನಡ ಅಭಿಮಾನಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು