ಕುಂದಾಪುರ ಮಿರರ್ ಸುದ್ದಿ…
ಕೋಟ : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮೈಸೂರಿನ ಅಂಬಾರಿ ಪ್ರಕಾಶನ ಪ್ರಕಟಿಸಿದ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆಯವರ ಯಕ್ಷ ಪ್ರಬಂಧಗಳ ಸಂಕಲನ “ಯಕ್ಷ ದೀವಟಿಗೆ” ಆಗಸ್ಟ್ 14ರ ಸೋಮವಾರ ಸಂಜೆ 5.30 ಕ್ಕೆ ಮಂಗಳೂರಿನ ಕೊಡಿಯಾಲಬೈಲ್ ಎಂ. ಜಿ. ರಸ್ತೆಯಲ್ಲಿರುವ ಕಲ್ಕೂರ ಪ್ರತಿಷ್ಠಾನದ ಕಛೇರಿಯಲ್ಲಿ ಅನಾವರಣಗೊಳ್ಳಲಿದೆ.
ಯಕ್ಷಗಾನ ವಿದ್ವಾಂಸರಾದ, ಡಾ. ಪ್ರಭಾಕರ ಜೋಷಿ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆವಹಿಸಲಿದ್ದಾರೆ. ಸಾಹಿತಿ ಜನಾರ್ದನ ಹಂದೆ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.