ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಸ್ತಾನ ಸಮೀಪ ಮಾಬುಕಳದ ಚೇತನ ಪ್ರೌಢಶಾಲೆ ಇದರ ನವೀಕೃತ ವಿಜ್ಞಾನ ಪ್ರಯೋಗ ಶಾಲೆಯನ್ನು ಆ. 10.ರಂದು ಸಂಸ್ಥೆಯ ಹಿಂದಿನ ವಿದ್ಯಾರ್ಥಿ, ಪ್ರಸ್ತುತ ಜಪಾನಿನ ಮಿಯಾಸಾಕಿ ವಿಶ್ವವಿದ್ಯಾಲಯದ ಹೃದಯ ರಕ್ತನಾಳದ ಶರೀರ ಶಾಸ್ತ್ರ ವಿಭಾಗದ ಪ್ರೋಫೆಸರ್ ಡಾ. ಹರೀಶ್ ಕುಮಾರ್ ಮಧ್ಯಸ್ಥ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಡುಗೆ ಸ್ಮರಿಸಿ ಶಾಲಾ ಆಡಳಿತ ಮಂಡಳಿ ವತಿಯಿಂದ ಡಾ. ಹರೀಶ್ ಕುಮಾರ್ ಮಧ್ಯಸ್ಥರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ರಾಜಾರಾಮ್ ಭಟ್, ಕೋಶಾಧಿಕಾರಿ ಎ.ಮಹಾಬಲೇಶ್ವರ ಹೆಬ್ಬಾರ್, ವಿಘ್ನೇಶ್ವರ ಅಡಿಗ ,ರಾಮದೇವ ಹಂದೆ ಹಾಗೂ ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಚೇರ್ಮನ್ ತಾರಾನಾಥ ಶೆಟ್ಟಿ ಹಾಗೂ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷ ಅರವಿಂದ ಶರ್ಮ ,ಕಾರ್ಯದರ್ಶಿ ಕರುಣಾಕರ ಶೆಟ್ಟಿ ಗುಂಡ್ಮಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ ಐತಾಳ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜ್ಞಾನ ಶಿಕ್ಷಕ ಗೋವಿಂದ ರಾವ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.