ದೇವಳದ ಸ್ವಚ್ಛತಾ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ- ಸತೀಶ್ ಹೆಚ್ ಕುಂದರ್
ಕುಂದಾಪುರ ಮಿರರ್ ಸುದ್ದಿ…
ಕೋಟ: ದೇವರನ್ನು ಅತಿ ಸನಿಹದಲ್ಲಿ ಕಾಣಬೇಕಾದರೆ ಭಕ್ತಿಯ ಮೂಲಕ ಸ್ಪರ್ಶಿಸಬಹುದಾಗಿದೆ ಅದೇ ರೀತಿ ದೇವಳದ ಧಾರ್ಮಿಕ ಕಾರ್ಯದ ನಡುವೆ ಅಲ್ಲಿನ ಸ್ವಚ್ಛಕಾರ್ಯವು ಮಹತ್ತರವಾದ ಸ್ಥಾನ ಪಡೆದುಕೊಳ್ಳುತ್ತದೆ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್.ಹೆಚ್.ಕುಂದರ್ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಹಯೋಗದೊಂದಿಗೆ ಪರಿಸರಸ್ನೇಹಿ ಅಭಿಯಾನ 175ನೇ ವಾರದ ಕಾರ್ಯಕ್ರಮ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿನ ಸುತ್ತಮುತ್ತ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿ ಧಾರ್ಮಿಕ ಕಾರ್ಯ ಎಷ್ಟು ಮಹತ್ತ ಪಡೆಯುತ್ತದೆಯೋ ಅದೇ ರೀತಿ ದೇವರ ಕಾರ್ಯದಲ್ಲಿ ನಾನಾ ರೀತಿಯ ಸೇವೆಗಳು ಅತಿ ಮಹತ್ವದ ಸ್ಥಾನ ಪಡೆದುಕೊಂಡಿದೆ ಈ ದಿಸೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯ ದೇವರು ಸದಾ ಅನುಗ್ರಹಿಸುವ ಕಾರ್ಯವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಣೂರು ದೇವಸ್ಥಾನದ ಟ್ರಸ್ಟಿ ಬಾಬು ಕೋಟ, ಕೃಷ್ಣ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಕಾರ್ಯದರ್ಶಿ ಸುಧೀಂದ್ರ ಜೋಗಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ವಿಪ್ರ ಮಹಿಳಾ ಬಳಗದ ಸುಜಾತ ಬಾಯರಿ, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ, ಕೋಟ ಗ್ರಾಮಪಂಚಾಯತ್ ಸದಸ್ಯೆ ಗುಲಾಬಿ ಪೂಜಾರಿ, ಸಂಯುಕ್ತ ಸಂಘಗಳ ಸಂಚಾಲಕ ಸತ್ಯನಾರಾಯಣ ಆಚಾರ್, ವಿವಿಧ ಸಂಘಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.