ಕುಂದಾಪುರ ಮಿರರ್ ಸುದ್ದಿ…
ಕೋಟ : ಜಿಲ್ಲಾ ಟ್ಯಾಕ್ಸಿ ಮ್ಯಾನ್ ಮತ್ತು ಮ್ಯಾಕ್ಸಿ ಕ್ಯಾಬ್ ಎಸೋಸಿಯೇಷನ್ ಇದರ ಸಾಸ್ತಾನ ಘಟಕದ ಪಧಾಧಿಕಾರಿಗಳ ಆಯ್ಕೆ ಆ.8ರಂದು ಸಾಸ್ತಾನದ ಗುಂಡ್ಮಿ ಶಾಲೆಯಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಾಸ್ತಾನದ ಅನ್ಯೂನ್ಯತಾ ಟೂರಿಸ್ಟ್ ಚಾಲಕ ಮಾಲಕ ಸಂಘದ ಅಧ್ಯಕ್ಷ ತ್ಯಾಗರಾಜ್ ವಹಿಸಿದ್ದರು.
ಜಿಲ್ಲಾ ಟ್ಯಾಕ್ಸಿಮ್ಯಾನ್ ಮತ್ತು ಮ್ಯಾಕ್ಸಿ ಕ್ಯಾಬ್ ಎಸೋಸಿಯೇಷನ್ ಇದರ ಪ್ರಧಾನ ಕಾರ್ಯದರ್ಶಿ ರಮೇಶ್ ಕ್ಯೊಟ್ಯಾನ್ ,ಜಿಲ್ಲಾ ಟಾಕ್ಸಿ ಮ್ಯಾನ್ ಮತ್ತು ಮಾಕ್ಸಿಕ್ಯಾಬ್ ಎಸೋಸಿಯೇಷನ್ ಸಾಸ್ತಾನ ಘಟಕದ ಅಧ್ಯಕ್ಷರಾಗಿ ಓಣಿಮನೆ ರಾಘವೇಂದ್ರ ಪೂಜಾರಿ ಮರು ಆಯ್ಕೆಗೊಳಿಸಲಾಯಿತು. ಕಾರ್ಯದರ್ಶಿಯಾಗಿ ರವಿ ಪೂಜಾರಿ ಕೋಶಾಧಿಕಾರಿಯಾಗಿ ಗ್ರೆಗೋರಿ ಪಿಂಟೋ ಇವರುಗಳು ಆಯ್ಕೆಗೊಂಡರು.