ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ನೇಹಕೂಟ ಮಣೂರು ಹಾಗೂ ಶ್ರೀರಾಮ ಮಹಿಳಾ ಭಜನಾ ಮಂಡಳಿ ಮಣೂರು ಇವರ ಸಂಯೋಜನೆಯೊಂದಿಗೆ ಅಧಿಕ ಶ್ರಾವಣ ಮಾಸದ ವಿಶೇಷ ಭಜನಾ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ದೀಪ ಬೆಳಗಿಸಿ ಚಾಲನೆ ನೀಡಿದರು.
ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ, ಶ್ರೀರಾಮ ಮಹಿಳಾ ಭಜನಾ ಮಂಡಳಿ ಮಣೂರು ಚಂದ್ರಿಕಾ ಭಟ್ ಇವರುಳನ್ನು ಸನ್ಮಾನಿಸಲಾಯಿತು.
ಜೋರ್ಣೋದ್ಧಾರ ಸಮಿತಿಯ ಅರುಣಾಚಲ ಮಯ್ಯ,ಎಮ್ ಎನ್ ಮಧ್ಯಸ್ಥ,ಎಂ.ವಿ ಮಯ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಶ್ರೀ ದೇವರಿಗೆ ಬಹುಕಂಠ ಸಿರಿಯಲ್ಲಿ 33 ದೇವರನಾಮಗಳ ಭಜನಾ ಸಂಕೀರ್ತನೆ ನಡೆಯಿತು, ಸಂಕೀರ್ತನೆಯಲ್ಲಿ ಹಾರ್ಮೋನಿಯಂನಲ್ಲಿ ಗೀತಾ ತುಂಗಾ ಚಿತ್ರಪಾಡಿ,ತಬಲಾದಲ್ಲಿ ಸುರೇಶ್ ಆಚಾರ್ ಮಣೂರು ಭಾಗವಹಿಸಿದರು.