ದೇಶ ಮತ್ತೊಮ್ಮೆ ಅಖಂಡತೆಯತ್ತ ದಾಪುಗಾಲು ಇಡುತ್ತಿದೆ – ಹಾರಿಕಾ ಮಂಜುನಾಥ

0
315

ಕೋಟ ಹಿಂದೂ ಜಾಗರಣಾ ವೇದಿಕೆಯ ಆಶ್ರಯಲ್ಲಿ ಪಂಜಿನ ಮೆರವಣಿಗೆ

ಕುಂದಾಪುರ ಮಿರರ್ ಸುದ್ದಿ…
ಕೋಟ: ಹಿಂದೂ ಜಾಗರಣಾ ವೇದಿಕೆ ಕೋಟ ಇವರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾನುವಾರ ಕೋಟ ಹಳೆ ಸಂತೆ ಮಾರುಕಟ್ಟೆ ಪರಿಸರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಸ್ವಾತಂತ್ರ್ಯ ಪೂರ್ವದಲ್ಲೆ ಅಖಂಡವಾಗಿದ್ದ ಈ ಭರತಖಂಡವನ್ನು ಮೂರು ತುಂಡುಗಳನ್ನಾಗಿಸಿದ ಬ್ರಿಟಿಷ್‍ರ ಮಧ್ಯೆ ಈ ದೇಶದ ಉನ್ನದ ಹದ್ದೆ ಅಲಂಕರಿಸಿದ ನಮ್ಮ ನಾಯಕರುಗಳು ದೇಶದ ಹಿತ ಕಾಯುವಲ್ಲಿ ಎಡೆವಿದರು. ಅದು ನಿರಂತ 75 ವರ್ಷಗಳ ಕಾಲ ಭಯೋತ್ಪಾದಕ ರೀತಿಯಲ್ಲಿ ಅನುಭವುಸುಂತ್ತಾಗಿದೆ. ಮುಸ್ಲಿಂ ಸಮಯದಾಯಕ್ಕೆ ಎರಡು ರಾಷ್ಟ್ರಗಳನ್ನಿತ್ತು ಹಿಂದೂಗಳಿಗೆ ಹಿಂದೂಸ್ಥಾನ ನೀಡದೆ ನರಕದಲ್ಲಿರುವಂತೆ ಮಾಡಿದರು. ಈ ದೇಶಕ್ಕೊಸ್ಕರ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್, ರಾಜ್ ಗುರು, ಸಾರ್ವಕರನ್ನು ಮರೆಯುವಂತೆ ಮಾಡಿದ ನಮ್ಮ ಜಾತ್ಯಾತೀತ ಆಡಳಿತ ಶಾಹಿಗಳು ದೇಶವನ್ನು ಹೀನ ಸ್ಥಿತಿಗೆ ಕೊಂಡ್ಯೋಯ್ದಿದ್ದಾರೆ. ದೇಶದ ಹಿತ ಕಾಯುವ ದಿಸೆಯಲ್ಲಿ ಉಕ್ಕಿನಂತ ವ್ಯಕ್ತಿತ್ವ ಇರಿಸಿಕೊಂಡ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಧ್ವನಿ ಅಡಗಿಸುವ ಕಾರ್ಯ ಕೂಡಾ ಮಾಡಿದರು.

Click Here

ಲವ್ ಜಿಹಾದ್, ಭಯೋತ್ಪಾದನೆ ಕ್ರಮಕ್ಕೆ ಆಗ್ರಹ
ಸಭೆಯ ಉದ್ದಕ್ಕೂ ಲವ್ ಜಿಹಾದ್, ಭಯೋತ್ಪಾದನೆ ವಿರುದ್ಧ ಹರಿಹಾಯ್ದ ನಿಹಾರಿಕಾ ದೇಶದಲ್ಲಿ ಆಂತರಿಕ ಭಯೋತ್ಪಾದನೆ, ಹಿಂದೂ ಕಾರ್ಯಕರ್ತರ ಹತ್ಯೆ, ಹಿಂದು ಹೆಣ್ಮಕ್ಕಳ ಟಾರ್ಗೆಟ್ ಮಾಡಿ ಅವರ ವಿಡಿಯೋ ತುಳುಣುಗಳನ್ನು ಹರಿಬಿಡುವ ಷಡ್ಯಂತರದ ವಿರುದ್ಧ ಆಕ್ರೋಶ ಹೊರಹಾಕಿದರು. ಜಾತ್ಯತೀತೆತ ಹೆಸರಿನಲ್ಲಿ ಒಲೈಕೆ ರಾಜಕಾರಣ ಮಾಡುವ ರಾಜಕಾರಣಿಗಳ ವಿರುದ್ಧ ಎಚ್ಚರಿಕೆ ನೀಡಿದಾಕೆ ಹಿಂದೂ ಸಮಾಜ ಸಶಕ್ತವಾಗಿ ಪುಟಿದೆದ್ದು ಸಂಘಟಿತ ಹೋರಾಟ ನೀಡಲಿದೆ ಎಂದರು.

ಪ್ರಸ್ತುತ ವಿದ್ಯಾಮಾನಗಳನ್ನು ಗಮನಿಸಿದರೆ ಹಿಂದೂ ಹೆಣ್ಣುಮಕ್ಕಳನ್ನು ಕೇಂದ್ರವಾಗಿರಿಸಿಕೊಂಡು ಲವ್ ಜಿಹಾದ್ ರೀತಿಯ ಕತ್ಯ ಎಸೆಗಲಾಗುತ್ತಿದೆ ಇದಕ್ಕೆ ಹಿಂದೂ ಪೋಷಕರು ಜಾಗೃತರಾಗಬೇಕಿದೆ ಇನ್ನೊಂದೆಡೆ ಮತಾಂತರ ಪ್ರಕ್ರೀಯೆ ನಮ್ಮ ಧಾರ್ಮಿಕ ಆಚರಣೆಯನ್ನೆ ಟಾರ್ಗೆಟ್ ಮಾಡಲಾಗುತ್ತಿದೆ ಈ ಬಗ್ಗೆ ಜಾಗೃತರಾಗಿ ನಮ್ಮ ಸಂಸ್ಕಾರ, ಸಂಪ್ರದಾಯ ಆಚಾರ ವಿಚಾರಗಳ ಬಗ್ಗೆ ಹಿಂದೂ ಸಮಾಜ ಸದಾ ಚಿಂತನಾಶೀಲರಾಗಬೇಕೆಂದು ಕರೆ ಇತ್ತರು.
ಇದೇ ವೇಳೆ ಹಾರಿಕಾ ಮಂಜುನಾಥ ಇವರನ್ನು ಜಾಗರಣಾ ವೇದಿಕೆ ವತಿಯಿಂದ ಗೌರವಿಸಲಾಯಿತು.

ಸಭಾ ಅಧ್ಯಕ್ಷತೆಯನ್ನು ನಿವೃತ್ತ ಯೋಧ ಯೋಗೀಶ್ ಕಾಂಚನ್ ಪಡುಕರೆ ವಹಿಸಿದ್ದರು.ಹಿಂದೂ ಜಾಗರಣಾ ವೇದಿಕೆ ಕೋಟ ಘಟಕದ ಅಧ್ಯಕ್ಷ ಪ್ರಶಂತ್ ಮಟಪಾಡಿ,ಗೌರವಾಧ್ಯಕ್ಷ ಸುರೇಶ್ ಸಮತಾ,ಉಡುಪಿ ಜಿಲ್ಲಾ ಸಹಸಂಚಾಲಕ ನವೀನ್ ಗಂಗೋಳ್ಳಿ,ತಾಲೂಕು ಸಂಚಾಲಕ ಶ್ರೀನಿಧಿ ಉಪಸ್ಥಿತರಿದ್ದರು. ಹಿ.ಜಾ.ವೇ ಕೋಟ ಘಟಕದ ಪ್ರಮೋದ್ ಆಚಾರ್ ಸ್ವಾಗತಿಸಿದರು. ರಂಜೀತ್ ಕುಮಾರ್ ಅಖಂಡಭಾರತದ ಪ್ರತಿಜ್ಞಾ ವಿಧಿ ಭೋಧಿಸಿದರು.ಕಾರ್ಯಕ್ರಮವನ್ನು ಮಂಜುನಾಥ ಆಚಾರ್ ನಿರೂಪಿಸಿದರು.

ಈ ಮೊದಲು ಸಾಲಿಗ್ರಾಮ ಶ್ರೀ ಆಂಜನೇಯ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ಪಂಜಿಗೆ ದೀಪ ಪ್ರಜ್ವಲಿಸಿಕೊಂಡು ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಟ ಹಳೆ ಸಂತೆ ಮಾರುಕಟ್ಟೆ ಸಮೀಪದವರೆಗೆ ಸಮಾಪ್ತಿಗೊಂಡಿತು.

Click Here

LEAVE A REPLY

Please enter your comment!
Please enter your name here