ಪಾಂಡೇಶ್ವರ ಗ್ರಾಮಪಂಚಾಯತ್ ನೂತನ ಕಟ್ಟಡ ಲೋಕಾರ್ಪಣೆ
Video
ಕುಂದಾಪುರ ಮಿರರ್ ಸುದ್ದಿ…
ಕೋಟ: ಗ್ರಾಮದ ಅಭಿವೃದ್ಧಿಯಲ್ಲಿ ಸ್ಥಳೀಯಾಡಳಿತ ಪಾತ್ರ ಬಹು ಮುಖ್ಯವಾದದ್ದು ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಪ್ರಶಂಸನೀಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಪಾಂಡೇಶ್ವರ ಗ್ರಾಮಪಂಚಾಯತ್ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ ಗ್ರಾಮ ಸರಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ ಆ ಕಾರ್ಯಗಳು ಶೀಘ್ರಗತಿಯಲ್ಲಿ ನೆರವೆರುವ ಹಾಗೇ ನೋಡಿಕೊಳ್ಳಬೇಕು, ಪಾಂಡೇಶ್ವರ ಗ್ರಾಮಪಂಚಾಯತ್ ತನ್ನ ವ್ಯಾಪ್ತಿಯ ಚೌಕಟ್ಟನ್ನು ಮೀರಿ ಯಶಸ್ಸು ಸಾಧಿಸಿದೆ. ಇದಕ್ಕೆ ಪ್ರತಿಯೊಬ್ಬರ ಸೇವೆ ಅತ್ಯಮೂಲ್ಯವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ದೀಪ ಪ್ರಜ್ವಲಿಸಿ ಸರಕಾರದ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಇದೇ ವೇಳೆ ಮಾಜಿ ಅಧ್ಯಕ್ಷರಾದ ಜಿ.ವಿಠ್ಠಲ ಪೂಜಾರಿ, ಸುಶೀಲ ಪೂಜಾರಿ, ರೋಷನಿ ಒಲಿವೇರ, ಬೇಬಿ,ಲೀಲಾವತಿ ಗಂಗಾಧರ್, ಗೋವಿಂದ ಪೂಜಾರಿ, ಪ್ರಸ್ತುತ ಅಧ್ಯಕ್ಷೆ ಕಲ್ಪನಾ ದಿನಕರ್ ಹಾಗೂ ಮಾಜಿ ಉಪಾಧ್ಯಕ್ಷರಾದ ನಾಗಮ್ಮ, ಕಮಲಾಕ್ಷಿ ಹಂದೆ, ಪ್ರಶಾಂತ್ ಶೆಟ್ಟಿ, ಪ್ರೇಮ ಆರ್ ಆಚಾರ್, ಪ್ರಸ್ತುತ ಉಪಾಧ್ಯಕ್ಷ ಸ್ವಿಲ್ವಸ್ಟಾರ್ ಡಿಸೋಜ ಇವರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಗ್ರಾಮಪಂಚಾಯತ್ ಕಟ್ಟಡ ಇಂಟಿರಿಯರ್ ಕಾಮಗಾರಿಗೆ ಸಹಾಯಧನ ನೀಡಿದ ಉದ್ಯಮಿ ಬಿ.ಎನ್ ಭಟ್ ಹಾಗೂ ಸಹಕರಿಸಿದ ಅಲ್ವಿನ್ ಆಂದ್ರಾದೆ ಇವರನ್ನು ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಕೋಟ ಅಮೃತೇಶ್ವರಿ ದೇವಸ್ಥಾನದ ಅಧ್ಯಕ್ಷ ಆನಂದ್ ಸಿ ಕುಂದರ್ , ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ, ಬ್ರಹ್ಮಾವರ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್ .ವಿ.ಇಬ್ರಾಹಿಂಪುರ, ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ ಪ್ರಾಸ್ತಾವನೆ ಸಲ್ಲಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸ್ಥಳೀಯರಾದ ಶ್ರೀಧರ ಪಿ.ಎಸ್, ಅಲ್ವಿನ್ ಆಂದ್ರಾದೆ ನಿರೂಪಿಸಿದರು. ಪಂಚಾಯತ್ ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ ಧನ್ಯವಾದಗೈದರು.
ಪಾಂಡೇಶ್ವರ ಗ್ರಾಮಪಂಚಾಯತ್ ನೂತನ ಕಟ್ಟಡ ಲೋಕಾರ್ಪಣಾ ಸಮಾರಂಭದಲ್ಲಿ ಕೆ.ಜಯಪ್ರಕಾಶ್ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ , ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್, ಕೋಟ ಅಮೃತೇಶ್ವರಿ ದೇವಸ್ಥಾನದ ಅಧ್ಯಕ್ಷ ಆನಂದ್ ಸಿ ಕುಂದರ್ ಮತ್ತಿತರರು ಇದ್ದರು.