ಕುಂದಾಪುರ ಮಿರರ್ ಸುದ್ದಿ…
ಕೋಟ: ಜಿಲ್ಲಾ ಪಂಚಾಯತ್ ಉಡುಪಿ, ಕರ್ನಾಟಕ ಗ್ರಾಮೀಣಾ ಜೀವನೋಪಾಯ ಅಭಿಯಾನದಡಿ ಪಾಂಡೇಶ್ವರ ಗ್ರಾಮ ಪಂಚಾಯತ್‍ನ ಸ್ನೇಹ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟಕ್ಕೆ ಒಳಪಡುವ 41ಸ್ವಸಹಾಯ ಗುಂಪಿನ ಸದಸ್ಯರಿಗೆ ತರಬೇತಿ ಕಾರ್ಯಗಾರವನ್ನು ಇತ್ತೀಚಿಗೆ ಹಮ್ಮಿಕೊಂಡಿದ್ದು ಇದರ ಸಮಾರೋಪ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಸಂಗೀತ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ವಹಿಸಿದ್ದರು. ತಾಲ್ಲೂಕು ಸಂಪನ್ಮೂಲ ವ್ಯಕ್ತಿಗಳಾದ ಅರ್ಪಿತಾ ಮಾತನಾಡಿ ಸ್ವಾವಲಂಬಿ ಬದುಕಿಗೆ ಸ್ವ ಉದ್ಯೋಗದ ಅಗತ್ಯತೆ ಕುರಿತು ಸದಸ್ಯರಿಗೆ ವಿವರವಾಗಿ ತಿಳಿಸಿದರು. ಸರ್ಕಾರದ ಯೋಜನೆಯಾದ ಉದ್ಯೋಗ ಖಾತ್ರಿಯಲ್ಲಿ ನೋಂದಾಯಿಸಿ ಕೊಳ್ಳುವ ಮೂಲಕ ಇಂಗುಗುಂಡಿ, ಪೌಷ್ಟಿಕ ತೋಟ, ಮಲ್ಲಿಗೆ ಕೃಷಿ, ಎರೆಹುಳು ತೊಟ್ಟಿ, ಬಾವಿ ರಚನೆ, ಇತ್ಯಾದಿ ಸವಲತ್ತುಗಳನ್ನು ಹೇಗೆ ಪಡೆಯಬಹುದೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಾಂಡೇಶ್ವರ ಪಂಚಾಯತ್ ಪಿಡಿಓ ಇನಾಯತ್ ಉಲ್ ಬೇಗ್, ಪಂಚಾಯತ ಉಪಾಧ್ಯಕ್ಷ ಸಿಲ್ವಸ್ಟರ್ ಡಿಸೋಜಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಮೋಹನ್, ವೈ ಬಿ ರಾಘವೇಂದ್ರ, ರವೀಶ್, ಶ್ರೀ ರಾಮ್, ಸುಜಾತ, ಸಂಧ್ಯ ರಾವ್, ಎಲ್‍ಸಿಆರ್‍ಪಿ ಚೈತ್ರ, ನಾಗರತ್ನ, ಒಕ್ಕೂಟದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಕವಿತಾ ಸ್ವಾಗತಿಸಿ, ಸುಜಾತ ವಂದಿಸಿದರು. ಒಕ್ಕೂಟದ ಉಷಾ ಗಣೇಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.