Video:
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪುರಸಭಾ ವ್ಯಾಪ್ತಿಯ ಭಂಡಾರ್ಕಾರ್ಸ್ ಕಾಲೇಜಿನ ಅಕ್ರಮ ಕಟ್ಟಡದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಜಿಮ್ ತರಗತಿಯನ್ನು ತೆರವುಗೊಳಿಸುವಂತೆ ಹಾಗೂ ಜಿಮ್ ಮಾಲೀಕನಿಂದ ಸ್ಪೋರ್ಟ್ ಕ್ಲಬ್ ಒಂದನ್ನು ಹೈಜಾಕ್ ಮಾಡಿ ನೋಂದಣಿ ಮಾಡಿಸಿರವುದನ್ನು ಅಮಾನ್ಯ ಮಾಡುವಂತೆ ಆಗ್ರಹಿಸಿ ಕುಂದಾಪುರದ ತಹಸೀಲ್ದಾರರಿಗೆ ಖಾರ್ವಿಕೇರಿ ಕಿಂಗ್ಫಿಶರ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಮನವಿ ಮಾಡಿದ್ದಾರೆ.
ಬುಧವಾರ ಬೆಳಿಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ನೀಡಲಾಗಿದ್ದು, ಖಾರ್ವಿಕೇರಿಯ ಸತೀಶ್ ಖಾರ್ವಿ ಎಂಬುವರು ಭಂಡಾರ್ಕಾರ್ಸ್ ಕಾಲೇಜಿನ ಅಕ್ರಮ ಕಟ್ಟಡದ ಕಟ್ಟಡ ಸಂಖ್ಯೆ 393-13 8ನೇ ವಾರ್ಡ್ರಲ್ಲಿ ‘ನ್ಯೂ ಹರ್ಕ್ಯೂಲಸ್ ಜಿಮ್’ನ್ನು ನಡೆಸುತ್ತಿದ್ದು, ಈಗಾಗಲೇ ಇದನ್ನು ತೆರವು ಮಾಡಲು ಭಂಡಾರ್ಕಾರ್ಸ್ ಕಾಲೇಜಿನ ಮುಖ್ಯಸ್ಥರು ಪುರಸಭೆಯ ಮುಖ್ಯಾಧಿಕಾರಿಗಳಿಗೆ ನೋಟಿಸು ನೀಡಿರುತ್ತಾರೆ. ಆದರೂ ಇಲ್ಲಿ ಉದ್ಯಮ ಪರವಾನಿಗೆ ಇಲ್ಲದೆ ನ್ಯೂ ಹರ್ಕ್ಯೂಲಸ್ ಜಿಮ್ನ್ನು ನಡೆಸಲಾಗುತ್ತಿದ್ದು, ತಕ್ಷಣ ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶೋಭಾಲಕ್ಷ್ಮೀ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಂದರು.
ಇಲ್ಲಿ ತರಬೇತಿ ಪಡೆಯಲು ಬರುವ ಶಿಕ್ಷಣಾರ್ಥಿಗಳಿಗೆ ಯಾವುದೇ ರೀತಿಯ ಭದ್ರತೆ ಇಲ್ಲ. ಮಹಿಳೆಯರಿಗೂ ಕೂಡ ತರಬೇತಿ ನೀಡಲಾಗುತ್ತಿದ್ದು, ಮಹಿಳೆಯರಿಗೆ ನೀಡಬೇಕಾದ ಮೂಲಭೂತ ಸೌಕರ್ಯದ ಕೊರತೆ ಇದೆ. ಅನಧೀಕೃತವಾಗಿ ಪರವಾನಿಗೆ ಇಲ್ಲದೆ ನಡೆಸುವ ತರಬೇತಿ ಕೇಂದ್ರವಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಖಾರ್ವಿಕೇರಿಯಲ್ಲಿ ಸುಮಾರು 45 ವರ್ಷಗಳಿಂದ ನಮ್ಮ ಹಿರಿಯರು “ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್” ಎಂಬ ನಾಮಾಂಕಿತದಿಂದ ಕ್ರೀಡಾ ಚಟುವಟಿಕೆಯೊಂದಿಗೆ, ಸಾಮಾಜಿಕ ಕಾರ್ಯ ನೆರವೇರಿಸಿಕೊಂಡು ಬಂದಿರುತ್ತೇವೆ. ಆದರೆ ನಾವು ನಮ್ಮ ಕ್ಲಬ್ನು ನೋಂದಣಿ ಮಾಡಿರುವುದಿಲ್ಲ. ಇದನ್ನೇ ಮುಂದಿಟ್ಟುಕೊಂಡು ಕಿಂಗ್ಫಿಶರ್ ಸ್ಪೋಟ್ಸ್ ಕ್ಲಬ್ ನಮ್ಮ ಸಂಸ್ಥೆಯನ್ನು ಸತೀಶ ಖಾರ್ವಿ ನೋಂದಣಿ ಮಾಡಿಕೊಂಡಿದ್ದು, ಸ) ಎನ್ by 31 JUL 201 ನೋಂದಣಿಯನ್ನು ಅಮಾನ್ಯಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ರಂಜಿತ್ ಖಾರ್ವಿ, ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ಹಾಗೂ ಸದಸ್ಯರು ಹಾಜರಿದ್ದರು.