ಜಿಲ್ಲಾ ಕರಾಟೆ ಚಾಂಪಿಯನ್ಶಿಪ್ : ಕುಂದಾಪುರದ ನೇರಳಕಟ್ಟೆಯ ಶ್ರೀಶ ಗುಡ್ರಿ ಇವರಿಗೆ ಚಿನ್ನದ ಪದಕ – ರಾಜ್ಯ ಮಟ್ಟಕ್ಕೆ ಆಯ್ಕೆ

0
300

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಉಡುಪಿ ಜಿಲ್ಲಾ ಕರಾಟೆ ಚಾಂಪಿಯನ್ಶಿಪ್ – 2023
ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಇವರು ಆಯೋಜಿಸಿದ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (AKSKA) ಮತ್ತು ಕರಾಟೆ ಇಂಡಿಯಾ ಆರ್ಗನೈಸೇಷನ್(KIO) ಇವರ ಸಂಯೋಜನೆಯಲ್ಲಿ ಆ. 27ರಂದು ಪರ್ಕಳದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀಶ ಗುಡ್ರಿ ಇವರು ಭಾಗವಹಿಸಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ. ಇವರು ಈ ಮೊದಲು ದೆಹಲಿಯಲ್ಲಿ ನಡೆದಂತಹ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ.

Click Here

Click Here

ಕುಂದಾಪುರದ ಸಂತೋಷ್ ಮೊಗವೀರ ಮೇಲ್ ಹರ್ಜಿ ಮತ್ತು ಹೇಮಾವತಿ ಗುಡ್ರಿ ದಂಪತಿಯ ಪುತ್ರನಾದ ಶ್ರೀಶ ಗುಡ್ರಿ ಇವರು Phoenix Academy India ಇದರ ಮುಖ್ಯಸ್ಥ ಶಿಹಾನ್ ಕೀರ್ತಿ ಜಿಕೆ ಇವರ ಶಿಷ್ಯ ಕೋಚ್ ಅಕ್ಷಯ್ ಹೆಮ್ಮಾಡಿ ಇವರಲ್ಲಿ ತರಬೇತಿ ಪಡಯುತ್ತಿದ್ದಾರೆ.

Click Here

LEAVE A REPLY

Please enter your comment!
Please enter your name here