ಕುಂದಾಪುರ ಮಿರರ್ ಸುದ್ದಿ…
ಕೋಟ: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆ.28 ಸೋಮವಾರದಂದು ಶ್ರೀ ಶಾರದಾ ಪ್ರೌಢಶಾಲೆ ಚೆರ್ಕಾಡಿ ಇಲ್ಲಿ ನಡೆದ ಬ್ರಹ್ಮಾವರ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟದಲ್ಲಿ ಕೋಟ ವಿವೇಕ ಪ. ಪೂ ಕಾಲೇಜಿನ ಪ್ರೌಢಶಾಲಾ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದಿತ್ಯ, ಪನ್ನಗ,ನಿದೀಶ,ಅಜಯ , ಸಮೀಕ್ಷಿತ,ನಿತೀಶ,ಉಲ್ಲಾಸ ,
ಅನ್ವೇಶ ,ದೇವಿಪ್ರಸಾದ್ , ಭುವನ್ ತಂಡದಲ್ಲಿದ್ದರು,ಉತ್ತಮ ಪ್ರದರ್ಶನ ನೀಡಿದ ಪನ್ನಗ ಉತ್ತಮ ಎತ್ತುಗೆಗಾರ ಪ್ರಶಸ್ತಿಯನ್ನು ಹಾಗೂ ಆದಿತ್ಯ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಪಡೆದರು.