ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ,ಹೋರಾಟದ ತಳಹದಿ ಹಿಂದುಳಿದವರಿಗೆ ಶ್ರೀರಕ್ಷೆ – ಮಾಜಿ ಸಚಿವ ಕೋಟ
ಕುಂದಾಪುರ ಮಿರರ್ ಸುದ್ದಿ…
ಕೋಟ: ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ ಅವರ ಹೋರಾಟದ ತಳಹದಿ ಹಿಂದುಳಿದರನ್ನು ಬಲು ಎತ್ತರಕ್ಕೆ ಕೊಂಡ್ಯೋಯ್ದಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಗುರುವಾರ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ ಇದರ ಆಶ್ರಯದಲ್ಲಿ ಕೋಟ ಶ್ರೀ ನಾರಾಯಣಗುರು ಮಂದಿರಲ್ಲಿ ಬ್ರಹ್ಮಶ್ರೀ ನಾರಾಯಣಗುರು 169ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಎಲ್ಲಾ ವರ್ಗದ ಜನರ ನಾಡಿ ಮಿಡಿತ ಅರಿತು, ಮೇಲು ಕೀಳು,ಜಾತಿ ಮತದ ವಿರುದ್ಧ ಸಿಡಿದ್ದೆದ್ದು ಶೋಷಿತರ ಧ್ವನಿಯಾಗಿದ್ದರು, ಅವರ ಜೀವನ ಇಂದಿನ ದಿನಕ್ಕೆ ಸ್ಪೂರ್ತಿಯ ಸೆಲೆಯಾಗಿದೆ ಎಂದು ಶುಭಹಾರೈಸಿದರು.
ಹೆಜಮಾಡಿ ಮಹೇಶ್ ಶಾಂತಿ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಪೌರೋಹಿತ್ಯ ಕಾರ್ಯಕ್ರಮಗಳು ನೆರವೆರಿತು.
ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಸಂಘದ ಯುವ ಘಟಕದ ಅಧ್ಯಕ್ಷ ಸುರೇಶ್ ಗಿಳಿಯಾರು ದಂಪತಿಗಳು ಭಾಗಿಯಾದರು.
ಗುರು ಜಯಂತಿ ಪ್ರಯುಕ್ತ ವಿಶೇಷ ಪೂಜೆ,ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡ,ಸಾಸ್ತಾನದ ಬ್ರಹ್ಮಬೈದರ್ಕಳ ಮಹಿಳಾ ಭಜನಾ ತಂಡ ಹಾಗೂ ಶ್ರೀ ರಾಮಾಮೃತ ಭಜನಾ ಮಂಡಳಿ ಪಡುಕರೆ ಇವರಿಂದ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಸದಾನಂದ ಗಿಳಿಯಾರು, ಪ್ರದಾನಕಾರ್ಯದರ್ಶಿ ಪ್ರಸಾದ್ ಬಿಲ್ಲವ, ಸಂಘದ ಹಿರಿಯರಾದ ಬಿ.ಕೆ ತೇಜ ಪೂಜಾರಿ, ಪುಟ್ಟ ಪೂಜಾರಿ, ಶಿರಿಯಾರ ನರಸಿಂಹ ಪೂಜಾರಿ, ರಾಜು ಪೂಜಾರಿ,ಶೀನ ಪೂಜಾರಿ,ವಿಠ್ಠಲ ಪೂಜಾರಿ, ರಾಜು ಪೂಜಾರಿ, ಗೋಪಾಲ ಪೂಜಾರಿ, ಸಂತೋಷ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ವಸಂತಿ ಉಮೇಶ್, ಬ್ರಹ್ಮಶ್ರೀ ನಾರಾಯಣಗುರು ವಿವಿದೋದ್ದೇಶ ಸ್ವಸಹಾಯ ಸಂಘದ ಅಧ್ಯಕ್ಷೆ ಸುಧಾ ಎ ಪೂಜಾರಿ, ಕಾರ್ಯದರ್ಶಿ ಸ್ಮೀತಾ ಆರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.