ಕುಂದಾಪುರ ಮಿರರ್ ಸುದ್ದಿ…
ಕೋಟ: ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜಯಂತೋತ್ಸವದ ಹಿನ್ನಲ್ಲೆಯಲ್ಲಿ ಇಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಬಾಳಕುದ್ರು ಹಂಗಾರಕಟ್ಟೆ ಇವರ ಆಶ್ರಯದಲ್ಲಿ ಗುರು ಜಯಂತಿ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ, ಗುರುಪೂಜೆ ಕಾರ್ಯಕ್ರಮ ಸಂಘದ ಕಛೇರಿಯಲ್ಲಿ ಏರ್ಪಡಿಸಲಾಯಿತು.
ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಸೂರ್ಯನಾರಾಯಣ ಅಡಿಗ ನೆರವೆರಿಸಿದರು.
ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಶಂಕರ್ ಪೂಜಾರಿ ಬಾಳಕುದ್ರು ಪೂಜಾ ಕೈಂಯರ್ಕವನ್ನು ನೆರವೆರಿಸಿದರು.
ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ವಿಜಯ ಕುಮಾರ್, ಸಂಫದ ಪ್ರಮುಖರಾದ ನಾರಾಯಣ ಪೂಜಾರಿ, ವಾಸುದೇವ ಕೋಟ್ಯಾನ್, ಶೀನಪ್ಪ ಡಿ ಅಮೀನ್, ರವೀಂದ್ರ ಸುವರ್ಣ, ಗುರಿಕಾರರಾದ ಕುಷ್ಟು ಪೂಜಾರಿ,ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲ ವಾಸುದೇವ ಕೋಟ್ಯಾನ್ ಇದ್ದರು. ನಂತರ ಸಂಘದ ಸದಸ್ಯರಿಂದ ಭಜನೆ, ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು.