ಕುಂದಾಪುರ ಮಿರರ್ ಸುದ್ದಿ…
ಕೋಟ: ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಗೋಳಿಗರಡಿ ಸಾಸ್ತಾನ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮದಿನಾಚರಣೆ ಪ್ರಯುಕ್ತ ಗುರು ಪೂಜೆ ಕಾರ್ಯಕ್ರಮ ಗೋಳಿಗರಡಿ ದೈವಸ್ಥಾನದಲ್ಲಿ ನಡೆಯಿತು. ಗೋಳಿಗರಡಿ ದೈವಸ್ಥಾನದ ಪಾತ್ರಿ ಶಂಕರ ಪೂಜಾರಿ ಪೂಜಾ ಕಾರ್ಯಕ್ರಮವನ್ನು ನೆರವೆರಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಜಿ.ವಿಠಲ ಪೂಜಾರಿಸಂಘದ ಅಧ್ಯಕ್ಷ ಎಮ್.ಸಿ ಚಂದ್ರಶೇಖರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ, ಕಾರ್ಯದರ್ಶಿ ಚಂದ್ರಮೋಹನ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ರತ್ನ ಜೆ ರಾಜ್, ಸಂಘದ ಪ್ರಮುಖರಾದ ಸುಧಾಕರ್ ಪೂಜಾರಿ ಐರೋಡಿ, ಸುರೇಶ್ ಪೂಜಾರಿ ಪಾಂಡೇಶ್ವರ, ರಾಜು ಪೂಜಾರಿ ಮೂಡಬೆಟ್ಟು, ಸುರೇಶ್ ಪೂಜಾರಿ ಗುಂಡ್ಮಿ ಸಂಬೋಡ್ಲು, ಗೋದಾವರಿ, ಉಷಾ ಗಣೇಶ್ ಪೂಜಾರಿ ಮತ್ತು ಸಂಘದ ಇತರ ಸದಸ್ಯರು ಇದ್ದರು.