ಕುಂದಾಪುರ: ವರ್ತುಲ ರಸ್ತೆಯ ಅಭಿವೃದ್ದಿಗೆ ಸರ್ಕಾರದಿಂದ 20 ಕೋಟಿ ರೂ. ಮಂಜುರಾತಿ – ಶಾಸಕ ಹಾಲಾಡಿ

0
889

ಕುಂದಾಪುರ ಮಿರರ್ ಸುದ್ದಿ…
ಕುಂದಾಪರ :
ಕುಂದಾಪುರ ಪುರಸಭಾ ವ್ಯಾಪ್ತಿಯ ವರ್ತುಲ ರಸ್ತೆಯ ಅಭಿವೃದ್ದಿಗೆ 20 ಕೋಟಿ ರೂ ಸರ್ಕಾರ ಆರ್ಥಿಕ ಇಲಾಖೆಯಿಂದ ಮಂಜೂರಾತಿ ದೊರಕಿದೆ. ಕೋಡಿ ರಸ್ತೆಯ ಅಭಿವೃದ್ದಿಗೂ ನೆರವು ದೊರಕಿದೆ. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಹಾಗೂ ಕುಂದಾಪರ ಪುರಸಭೆಗೆ ವಿಶೇಷ ಅನುದಾನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅವರು ಬುಧವಾರದ ನಡೆದ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕುಂದಾಪುರ ಹೆದ್ದಾರಿಯಿಂದ ಎಲ್.ಐ.ಸಿ ರಸ್ತೆಗೆ ಸಂಪರ್ಕ ಕಲ್ಪಿಸಬೇಕು ಎನ್ನುವ ಪುರಸಭೆಯ ಬೇಡಿಕೆಯನ್ನು ಸಂಬಂಧಪಟ್ಟವರ ಬಳಿ ಚರ್ಚಿಸಿ, ವೈಜ್ಞಾನಿಕವಾಗಿ ಅವಕಾಶ ನೀಡಲು ಸಾಧ್ಯತೆಯಿದ್ದರೆ ಕೊಡಿಸಲಾಗುವುದು ಎಂದರು.

ಪುರಸಭಾ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸ್ಥಳ ನೀಡುವ ಬಗ್ಗೆ ಸಂಚಾರ ಠಾಣೆಯಯವರು ನೀಡಿದ ಮಾರ್ಗಸೂಚಿಗೆ ಅನುಮೋದನೆ ನೀಡುವ ಕುರಿತಾದ ಚರ್ಚೆಯಲ್ಲಿ ಒಂದು ವಾರದಲ್ಲಿ ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗುವುದು ಎಂದು ಅಧ್ಯಕ್ಷರು ಸೂಚಿಸಿದರು. ಇದಕ್ಕೆ ಗಿರೀಶ್ ಪ್ರತಿಕ್ರಿಯಿಸಿ ಸಭೆಗೆ ಯಾವ ಯಾವ ಅಧಿಕಾರಿಗಳು ಬೇಟಿ ನೀಡುತ್ತಾರೆ ಎನ್ನುವ ಬಗ್ಗೆ ಮುಂಚಿತವಾಗಿ ತಿಳಿಸಿದರೆ ಸದಸ್ಯರಿಗೆ ಆ ಬಗ್ಗೆ ಚರ್ಚೆಗೆ ವಿಷಯ ಸಂಗ್ರಹಿಸಲು ಅನುಕೂಲವಾಗುತ್ತದೆ. ಏಕಾಏಕಿ ವಿಷಯ ಪ್ರಸ್ತಾವಿಸಿದರೆ ಕಷ್ಟ ಎಂದರು. ಇದಕ್ಕೆ ಪ್ರಭಾಕರ ಧ್ವನಿಗೂಡಿಸಿದರು. ಮೋಹನದಾಸ ಶೆಣೈ ಮಾತನಾಡಿ, ಪುರಸಭೆಯ ವ್ಯಾಪ್ತಿಯ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶೇಷ ಸಭೆ ಕರೆಯುವುದರಿಂದ ಪುರಸಭೆಯ ಸಾಮಾನ್ಯ ಸಭೆಗೆ ಅಡ್ಡಿಯಾಗುವುದಿಲ್ಲ. ಈಬಗ್ಗೆ ಮುಂದಿನ ದಿನಗಳಲ್ಲಿ ಅಧ್ಯಕ್ಷರು ಗಮನ ಹರಿಸಬೇಕು ಎಂದರು.

ಯುಜಿಡಿ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಮತ್ತೆ ಮಾರ್ಧನಿಸಿತು. ವಿವಾದಿತ ಭೂ ಸ್ವಾಧೀನ ಪ್ರಕ್ರಿಯೆ ನಡೆದ ಸ್ಥಳದಲ್ಲಿ ವೆಟ್‍ವೇಲ್ ನಿರ್ಮಾಣದ ಬಗ್ಗೆ ಪ್ರಾರಂಭದಲ್ಲಿ ಆಕ್ಷೇಪ ಮಾಡಿದ್ದೆನೆ ಎಂದು ಕೆ.ಜಿ ನಿತ್ಯಾನಂದ ಹೇಳಿದರು. ಇಲ್ಲಿ ಹೆಚ್ಚುವರಿ ಹಣ ನೀಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ 2 ಪಟ್ಟು, ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಪಟ್ಟು ದರ ನೀಡುವುದು ಇದೆ. ಆದರೆ ಇಲ್ಲಿ ಹೆಚ್ಚುವರಿಯಾಗಿ ದರ ನಿಗದಿಯಾಗಿದ್ದು ಈ ಬಗ್ಗೆ ತನಿಖೆಗೆ ನಿರ್ಣಯ ಮಾಡಕಲಾಗಿದೆ ಎಂದು ಸದಸ್ಯ ಗಿರೀಶ್ ಜಿ.ಕೆ ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಗೋಪಾಲಕೃಷ್ಣ ಶೆಟ್ಟಿ ರಾಜ್ಯದ ಮಾರ್ಗಸೂಚಿಯನ್ವಯ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಪುರಸಭೆ ವತಿಯಿಂದ ಎಲ್ಲವೂ ಕಾನೂನು ಬದ್ದವಾಗಿ ಮಾಡಲಾಗಿದೆ ಎಂದರು.

ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಹೋಗಿದ್ದರೆ ತನಿಖೆ ನಡೆಯಲಿ. ಯಾವುದಾದರೂ ಒಂದು ತನಿಖಾ ಸಂಸ್ಥೆ ತನಿಖೆ ನಡೆಸಲಿದೆ ಎಂದು ಶಾಸಕರು ಹೇಳಿದರು. ಬಡವರ ಹಣ ಪೋಲಾಗಬಾರದು ಈ ಬಗ್ಗೆ ತನಿಖೆಯಾಗಬೇಕು ಎಂದು ಶ್ರೀಧರ್ ಹೇಳಿದರು. ಕಳೆದೆ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಎಂದು ಉಲ್ಲೇಖಿಸಲಾಗಿದೆ. ನಾನು ಸಹಮತ ವ್ಯಕ್ತಪಡಿಸಿಲ್ಲ ಎಂದು ಚಂದ್ರಶೇಖರ ಖಾರ್ವಿ ಹೇಳಿದರು. ಇದಕ್ಕೆ ಮೋಹನದಾಸ ಶೆಣೈ, ಪ್ರಭಾಕರ, ಸಂತೋಷ ಶೆಟ್ಟಿ, ಮೊದಲಾದವರು ಅಧ್ಯಕ್ಷರ ಪರವಾಗಿ ಸಮರ್ಥನೆ ಮಾಡಿದರು. ಚಂದ್ರಶೇಖರ್ ಪ್ರತಿಕ್ರಿಯೆಯನ್ನು ಅಶ್ಫಕ್ ಸಮರ್ಥಿಸಿಕೊಂಡರು.

ಕೋಡಿಯಲ್ಲಿ ಮೆಸ್ಕಾಂ ಸಮಸ್ಯೆ ನಿರಂತರವಾಗಿದ್ದು ಪುರಸಭೆ ಇದನ್ನು ಕಡೆಗಣನೆ ಮಾಡುತ್ತಿದೆ ಎಂದು ಆಶ್ಫಕ್ ವಾದಿಸಿದರು. ಅದಕ್ಕೆ ಅದ್ಯಕ್ಷರು ಕೋಡಿಯೂ ಕುಂದಾಪುರ ಪುರಸಭೆಯ ವ್ಯಾಪ್ತುಯ ಒಳಗೆ ಬರುವುದರಿಂದ ಪುರಸಭಾ ವ್ಯಾಪ್ತಿಯ ಸಮಸ್ಯೆಯೆಂದು ಕಾಣಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಮೋಹನದಾಸ ಶೆಣೈ, ಪ್ರಭಾಕರ, ರಾಘವೇಂದ್ರ ಖಾರ್ವಿ ಸಮರ್ಥನೆ ನೀಡಿದರು.

Click Here

Click Here

ವೆಟ್ ಮಿಕ್ಸ್ ಗೆ ನೀಡಲಾದ ಬಿಲ್ ಬಗ್ಗೆ ಸಂದೇಹ ಇದ್ದು ಬಿಲ್ ಪಾವತಿ ತಡೆಹಿಡಿಯಬೇಕು ಎಂದು ಸದಸ್ಯರು ಆಗ್ರಹಿಸಿದರು. ಒಳಚರಂಡಿ ವ್ಯವಸ್ಥೆ ಇನ್ನೂ ಆಮೆಗತಿಯಲ್ಲಿದೆ ರಸ್ತೆಯನ್ನು ಅಗೆಯಲಾಗಿದೆ. ಸರಿಪಡಿಸಿಕೊಟ್ಟಿಲ್ಲ ಎಂದು ಸದಸ್ಯರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಏಕೆ ವಿಳಂಬ? ಅವರಿಗೆ ನೋಟಿಸ್ ಮಾಡಿ ಎಂದು ಸೂಚಿಸಿದರು. ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಕಲಿ ಐದು ವೆಟ್‍ವೆಲ್ ಬರಲಿದ್ದು, ಈಗಾಗಲೇ ನಾಲ್ಕು ವೆಟ್ ವೇಲ್‍ಗೆ ಜಾಗ ಗೊತ್ತು ಪಡಿಸಲಾಗಿದೆ. ಇನ್ನೊಂದು ಸ್ಥಳ ಶೀಘ್ರ ಗೊತ್ತು ಪಡಿಸಲಾಗುವುದು. ಡಿಸೆಂಬರ್ ಒಳಗೆ ಅದನ್ನು ಅವರಿಗೆ ಹಸ್ತಾಂತರಿಸಲಾಗುವುದು ಎಂದರು.

ಪ್ರಭಾವತಿ ಶೆಟ್ಟಿ ಚಿಕನ್ ಸಾಲ್ ಮೂರನೇ ವಾರ್ಡ್‍ನ ಸಮಸ್ಯೆಯ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದರು. ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ವಿಶೇಷ ಅನುದಾನಕ್ಕೆ ಮನವಿ
ಕುಂದಾಪುರ ಪುರಸಭಾ ವ್ಯಾಪ್ತಿಗೆ ಶಾಸಕರು ಸಾಕಷ್ಟು ಅನುದಾನ ನೀಡಿದ್ದು, ಇನ್ನೂ ಕೂಡಾ ಹಲವು ಸಮಸ್ಯೆಗಳು ಅಗತ್ಯ ಅನುದಾನದ ಕೊರತೆ ಇದೆ. ಹಾಗಾಗಿ ಶಾಸಕರು ಕುಂದಾಪುರ ಪುರಸಭೆಗೆ ವಿಶೇಷ ಅನುದಾನ ಒದಗಿಸಿ ಕೊಡಬೇಕು ಎಂದು ಮೋಹನದಾಸ ಶೆಣೈ ಶಾಸಕರಿಗೆ ಮನವಿ ಮಾಡಿದರು.

ನಾಮ ನಿರ್ದೇಶಿತ ಸದಸ್ಯರ ಹಕ್ಕು-ಕರ್ತವ್ಯಗಳ ಬಗ್ಗೆ ವಾಕ್ಸಮರ
ಪುರಸಭೆಗೆ ಸರ್ಕಾರದಿಂದ ನಾಮನಿರ್ದೇಶಿತರಾಗುವ ಸದಸ್ಯರ ಹಕ್ಕುಗಳು ಮತ್ತು ಕರ್ತವ್ಯಗಳು, ಚುನಾಯಿತ ಸದಸ್ಯರಿಗೂ ನಾಮ ನಿರ್ದೇಶಿತ ಸದಸ್ಯರಿಗೂ ಇರುವ ವ್ಯತ್ಯಾಸಗಳ ಬಗ್ಗೆ ಚಂದ್ರಶೇಖರ ಖಾರ್ವಿ ಪ್ರಶ್ನೆ ಮಾಡಿದರು. ಈ ಬಗ್ಗೆ ಕೆರಳಿದ ನಾಮ ನಿರ್ದೇಶಿತ ಸದಸ್ಯರು ನಮ್ಮ ಹಕ್ಕುಗಳ ಬಗ್ಗೆ ಮಾಹಿತಿ ಬೇಕು ಎಂದು ಆಗ್ರಹಿಸಿದರು. ಸದಸ್ಯ ಮೋಹನದಾಸ ಶೆಣೈ ಮಾತನಾಡಿ ನಾಮನಿರ್ದೇಶಿತ ಸದಸ್ಯರಿಗೆ ಮತದ ಹಕ್ಕು ಇಲ್ಲ ಹೊರತುಪಡಿಸಿದರೆ ಉಳಿದೆಲ್ಲ ಅಧಿಕಾರವಿದೆ ಎಂದರು. ಇದಕ್ಕೆ ತೃಪ್ತರಾಗದ ಸದಸ್ಯರು ಕಾಯಿದೆ ಏನು ಹೇಳುತ್ತದೆ. ಮುಖ್ಯಾಧಿಕಾರಿಗಳು ತಿಳಿಸಬೇಕು ಎಂದು ಹಠ ಹಿಡಿದರು. ಆಗ ಶಾಸಕರು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಪಡೆಯಲಾಗುವುದು ಎಂದರು.

Click Here

LEAVE A REPLY

Please enter your comment!
Please enter your name here