ಯುವ ಬಂಟರ ಸಂಘ ಕುಂದಾಪುರ – ಆಸರೆ ಹಾಗೂ ನವಚೇತನ ಪೋತ್ಸಾಹಧನ ಸಮಿತಿಯ ಸಂಚಾಲಕರಾಗಿ ಸಂದೇಶ್ ಶೆಟ್ಟಿ ಸಳ್ವಾಡಿ ಆಯ್ಕೆ

0
490

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನಡೆಯುವ 2023-24ನೇ ಸಾಲಿನ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಆಸರೆ’ ಪೋತ್ಸಾಹಧನ ಹಾಗು ವಿಕಲಚೇತನ ವಿದ್ಯಾರ್ಥಿಗಳಿಗೆ ನೀಡಲಾಗುವ ‘ನವಚೇತನ’ ಪೋತ್ಸಾಹಧನದ ಸಮಿತಿಯ ಸಂಚಾಲಕರಾಗಿ ಕುಂದಾಪುರದ ಖ್ಯಾತ ನಿರೂಪಕ ಹಾಗು ಸಿಪ್ಲಾ ಕಂಪನಿಯಲ್ಲಿ ಏರಿಯಾ ಬ್ಯುಸ್ನೆಸ್ ಮ್ಯಾನೇಜರ್ ಆಗಿರುವ ಸಂದೇಶ್ ಶೆಟ್ಟಿ ಸಳ್ವಾಡಿಯವರು ಆಯ್ಕೆಯಾಗಿರುತ್ತಾರೆ.

Click Here

ಸಳ್ವಾಡಿ ರತ್ನಾವತಿ ವಾಸುದೇವ ಶೆಟ್ಟಿ ಅವರ ಮಗನಾಗಿದ್ದು ಇವರು ಕಾಲೇಜು ದಿನಗಳಲ್ಲಿ ರಾಷ್ಟ್ರೀಯಸೇವಾ ಯೋಜನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ತಮ್ಮ ಸಾಮಾಜಿಕ ಸೇವೆಯನ್ನು ಆರಂಭಿಸಿ, ಕಳೆದ 11 ವರ್ಷಗಳಿಂದ ಪ್ರತಿಷ್ಠಿತ ಔಷದ ಕಂಪನಿ ಸಿಪ್ಲಾ ಅಲ್ಲಿ ಕೆಲಸ ಮಾಡುತ್ತಿದ್ದು, ಬೆನಕ ಇವೆಂಟ್ಸ್ ಅಂಡ್ ಮ್ಯಾನೇಜ್ಮೆಂಟ್ ಎನ್ನುವ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಸ್ಥಾಪಿಸಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಸಂಘಟಿಸಿ ಹಾಗು ನಿರೂಪಿಸಿ ಪ್ರಸಿದ್ಧ ನಿರೂಪಕರೆನಿಸಿಕೊಂಡಿದ್ದಾರೆ, ಪ್ರಸ್ತುತ ಜೆಸಿಐ ಕುಂದಾಪುರ ಸಿಟಿ ಘಟಕದ ಕಾರ್ಯದರ್ಶಿಯಾಗಿ ಹಾಗು ಕುಂದಾಪುರ ಯುವ ಬಂಟರ ಸಂಘದ ದಶಮ ಸಂಭ್ರಮದ ಕಾರ್ಯಕಾರಿ ಸಮಿತಿಯ ಸಕ್ರೀಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೌರವಾಧ್ಯಕ್ಷರಾದ ಬಿ ಉದಯ ಕುಮಾರ್ ಶೆಟ್ಟಿ ಹಾಗು ಅಧ್ಯಕ್ಷರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ..

Click Here

LEAVE A REPLY

Please enter your comment!
Please enter your name here