ಎಕ್ಸಲೆಂಟ್ ಪಿಯು ಕಾಲೇಜು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಕೈಗಾರಿಕಾ ಕೇಂದ್ರಗಳಿಗೆ ಭೇಟಿ

0
441

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸುಣ್ಣಾ ರಿಯ ಎಕ್ಸಲೆಂಟ್ ಪ.ಪೂ. ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕೈಗಾರಿಕಾ ಸಂಸ್ಥೆಯ ವೀಕ್ಷಣೆ ಹಾಗೂ ಅಧ್ಯಯನ ವಿಷಯ ಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿದರು.

Click Here

ಕುಂದಾಪುರ ದ ಮಂಗಳೂರು ಟೈಲ್ಸ್ ಲಿಮಿಟೆಡ್ ನ ಓಂ ಟೈಲ್ಸ್ ಕಾರ್ಖಾನೆ ಗೆ ವಿದ್ಯಾರ್ಥಿಗಳು ಭೇಟಿ ಕೊಟ್ಟು ಹೆಂಚು ತಯಾರಿಸುವ ವಿವಿಧ ಹಂತಗಳ ಬಗ್ಗೆ ತಿಳಿದುಕೊಂಡರು. ತಯಾರಾದ ಹೆಂಚನ್ನು ವರ್ಗಿಕರಿಸುವುದು ಹಾಗೆ ವಿವಿಧ ಅಲಂಕಾರಿಕ ಹೆಂಚುಗಳು ಮತ್ತು ಇಟ್ಟಿಗೆ ತಯಾರಿಕೆಯ ಮಾಹಿತಿಯನ್ನು ಸಂಗ್ರಹಿಸಿದರು. ಕಾರ್ಖಾನೆ ಯ ಆಡಳಿತ ಮಂಡಳಿ ಯವರು ಈ ಎಲ್ಲಾ ಮಾಹಿತಿ ನೀಡುವಲ್ಲಿ ಸಹಕರಿಸಿದರು.

ಆ ಬಳಿಕ ಕುಂದಾಪುರ ದ ತಲ್ಲೂರಿನಲ್ಲಿರುವ ಮೆಟಟ ಮಂಜುನಾಥ ಗೇರು ಬೀಜ ಕಾರ್ಖಾನೆ ಗೆ ಭೇಟಿ ನೀಡಿ ಗೇರು ಬೀಜ ಸಂಸ್ಕರಣೆ ಹಾಗೂ ಸಿದ್ದಗೊಳಿಸಿದ ಉತ್ಪನ್ನದ ವಿವಿಧ ಹಂತಗಳ ಬಗ್ಗೆ ಕಾರ್ಖಾನೆ ಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರತಾಪ್ ಚಂದ್ರ ಶೆಟ್ಟಿ ಯವರು ವಿದ್ಯಾರ್ಥಿ ಗಳಿಗೆ ಸಮಗ್ರ ಮಾಹಿತಿ ನೀಡಿದರು.

ಈ ಒಂದು ದಿನದ ಕೈಗಾರಿಕಾ ಸಂಸ್ಥೆ ಗಳಿಗೆ ಭೇಟಿ ಹಾಗೂ ವೀಕ್ಷಣೆ ಕಾರ್ಯಕ್ರಮ ದಲ್ಲಿ ವಾಣಿಜ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ವಾಣಿಜ್ಯ ವಿಭಾಗದ ಉಪನ್ಯಾಸ ಕರು ಸಹಕರಿಸಿದರು.

Click Here

LEAVE A REPLY

Please enter your comment!
Please enter your name here