ಕುಂದಾಪುರ ಮಿರರ್ ಸುದ್ದಿ…
ಹೆಮ್ಮಾಡಿ :ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಉಲಾಖೆಯವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ
ಹರ್ಷಿಣಿ ಪ್ರಥಮ ಪಿ.ಯು.ಸಿ.59 ಕೆ.ಜಿ ವಿಭಾಗದಲ್ಲಿ ಚಿನ್ನ, 62ಕೆ.ಜಿ.ವಿಭಾಗದಲ್ಲಿ ಭೂಮಿಕಾ ದ್ವಿತೀಯ ಪಿ.ಯು.ಸಿ.ಚಿನ್ನ, 68ಕೆ.ಜಿ.ವಿಭಾಗದಲ್ಲಿ ಅಮಿಶಾ ಚೌದ್ರಿ ದ್ವಿತೀಯ ಪಿ.ಯು.ಸಿ. ಚಿನ್ನ, 70ಕೆ.ಜಿ.ವಿಭಾಗದಲ್ಲಿ ಪ್ರಜ್ವಲ್ ಎಸ್ ಪೂಜಾರಿ ದ್ವಿತೀಯ ಪಿ.ಯು.ಸಿ. ಚಿನ್ನ, 74ಕೆ.ಜಿ.ವಿಭಾಗದಲ್ಲಿ ಅದ್ವಿತ್ ದ್ವಿತೀಯ ಪಿ.ಯು.ಸಿ.ಚಿನ್ನ, 86ಕೆ.ಜಿ.ವಿಭಾಗದಲ್ಲಿ ಶ್ರೀನಿಧಿ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ, 92ಕೆ.ಜಿ.ವಿಭಾಗದಲ್ಲಿ ರೋಹಿತ್ ದ್ವಿತೀಯ ಪಿ.ಯು.ಸಿ.ಚಿನ್ನ, 97 ಕೆ.ಜಿ.ವಿಭಾಗದಲ್ಲಿ ಚೇತನ್ ಖಾರ್ವಿ ದ್ವಿತೀಯ ಪಿ.ಯು.ಸಿ. ಚಿನ್ನ, 125ಕೆ.ಜಿ.ವಿಭಾಗದಲ್ಲಿ ಶ್ರೀಷ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ, 60ಕೆ.ಜಿ.ವಿಭಾಗದಲ್ಲಿ ಸ್ವಸ್ತಿಕ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ, 72ಕೆ.ಜಿ.ವಿಭಾಗದಲ್ಲಿ ಗಗನ್ ಎಮ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ, 87ಕೆ.ಜಿ.ವಿಭಾಗದಲ್ಲಿ ಗಣೇಶ್ ಕೆ. ದ್ವಿತೀಯ ಪಿ.ಯು.ಸಿ. ಚಿನ್ನ, 97ಕೆ.ಜಿ.ವಿಭಾಗದಲ್ಲಿ ಸಂಪತ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ, 53ಕೆ.ಜಿ.ವಿಭಾಗದಲ್ಲಿ ದಿಶಾ ದ್ವಿತೀಯ ಪಿ.ಯು.ಸಿ. ಬೆಳ್ಳಿ, 57ಕೆ.ಜಿ.ವಿಭಾಗದಲ್ಲಿ ಶ್ವೇತಾ ದ್ವಿತೀಯ ಪಿ.ಯು.ಸಿ. ಬೆಳ್ಳಿ 60ಕೆ.ಜಿ.ವಿಭಾಗದಲ್ಲಿ ರತನ್ ಪ್ರಥಮ ಪಿ.ಯು.ಸಿ. ಬೆಳ್ಳಿ, 55ಕೆ.ಜಿ.ವಿಭಾಗದಲ್ಲಿ ಅಕ್ಷೋಭ್ಯ ದ್ವಿತೀಯ ಪಿ.ಯು.ಸಿ. ಬೆಳ್ಳಿ, 63ಕೆ.ಜಿ.ವಿಭಾಗದಲ್ಲಿ ಚೇತನ್ ಕುಮಾರ್ ದ್ವಿತೀಯ ಪಿ.ಯು.ಸಿ. ಬೆಳ್ಳಿ,77ಕೆ.ಜಿ.ವಿಭಾಗದಲ್ಲಿ ಆಶಿಕ್ ದೇವಾಡಿಗ ದ್ವಿತೀಯ ಪಿ.ಯು.ಸಿ. ಬೆಳ್ಳಿ,130ಕೆ.ಜಿ ವಿಭಾಗದಲ್ಲಿ ಸಮ್ರದ್ದ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಬೆಳ್ಳಿ, 50ಕೆ.ಜಿ.ವಿಭಾಗದಲ್ಲಿ ಅನನ್ಯ ಪ್ರಥಮ ಪಿ.ಯು.ಸಿ ಕಂಚಿನ ಪದಕ ಗಳಿಸಿದ್ದಾರೆ.
ಚಿನ್ನದ ಪದಕ ಪಡೆದ 13 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗುವುದರ ಮೂಲಕ ಸಾಧನೆ ಮೆರೆದಿದ್ದಾರೆ. ಒಟ್ಟಾರೆಯಾಗಿ 13 ಚಿನ್ನ, 7ಬೆಳ್ಳಿ, 1ಕಂಚಿನ ಪದಕ ಗಳಿಸುದರೊಂದಿಗೆ ಉಡುಪಿ ಜಿಲ್ಲೆಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
ವಿದ್ಯಾರ್ಥಿಗಳ ಅದ್ಭುತ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.