ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಪ್ಟೆಂಬರ್ 17ರಂದು ರಾಜ್ಯಾದ್ಯಂತ ವಿಶ್ವಕರ್ಮ ಜಯಂತೋತ್ಸವವನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಯವರು ಜಿಲ್ಲೆಯ ತಾಲೂಕಿನ ಹಾಗೂ ಗ್ರಾಮದಲ್ಲಿ ನೆರವೇರಿಸರಿದ್ದಾರೆ. ಜಿಲ್ಲಾಧಿಕಾರಿ ಕಛೇರಿ, ತಹಶೀಳ್ದಾರ್ ಕಛೇರಿ, ಗ್ರಾಮ ಪಂಚಾಯತ್ ಕಛೇರಿಯಲ್ಲಿ ಎಲ್ಲರೂ ಆಚರಿಸುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಎಲ್ಲಾ ವಿಶ್ವಕರ್ಮ ಬಂಧುಗಳು ಅವರವರ ಹತ್ತಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ವಿಶ್ವಕರ್ಮ ದೇವರ ಪೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಕ್ರೀಯವಾಗಿ ಭಾಗವಹಿಸುವ ಮೂಲಕ ವಿಶ್ವಕರ್ಮ ಜಯಂತೋತ್ಸವವನನು ಯಶಸ್ವಿಗೊಳಿಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ನೆರಂಬಳ್ಳಿ ರಮೇಶ್ ಆಚಾರ್ ತಿಳಿಸಿದರು.
ಅವರು ಸೆ.13ರಂದು ಕುಂದಾಪುರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಸಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತೋತ್ಸವವನ್ನು ಆಚರಿಸುವ ಬಗ್ಗೆ ಪ್ರಧಾನ ಮಂತ್ರಿಗಳು ಘೋಷಿಸಲಿರುವ ಅಕ್ಕಸಾಲಿಗರು. ಕಮ್ಮಾರರು. ಬಡಗಿಗಳು. ಶಿಲ್ಪಕಲಾ ಕ್ಷೇತ್ರದವರು. ಅನುಕೂಲ ಕಲ್ಪಿಸಲು ಘೋಷಿಸಲಾದ ಪ್ರಧಾನ ಮಂತ್ರಿ. ವಿಶ್ವಕರ್ಮ ಜಯಂತೋತ್ಸವ ಯೋಜನೆಗೆ ಸಪ್ಟೆಂಬರ್ 17ರಂದು ಚಾಲನೆ ಸಿಗಲಿದೆ. ವಿಶ್ವಕರ್ಮ ಜಯಂತೋತ್ಸವ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ದೇಶದ 70 ಪ್ರಮುಖ ಸ್ಥಳದಲ್ಲಿ ಕೇಂದ್ರದ 70 ಸಚಿವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದ್‍ನಲ್ಲಿ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕೇರಿಯವರು ನಾಗಪುರದಲ್ಲಿ, ವಿದೇಶಾಂಗ ಸಚಿವ ಎಸ್ ಜೈ ಶಂಕರ್ ು ತಿರುವನಂತಪುರದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸುಮಾರು 13 ಸಾವಿರ ಕೋಟಿ ರೂಪಾಯಿಯನ್ನು ವಿಶ್ವಕರ್ಮ ಸಮಾಹದ ಅಭಿವೃದ್ದಿಗೆ ನೀಡಲಾಗಿದ್ದು, ಈ ಯೋಜನೆಗಳನ್ನು ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ದಿನಾಚರಣೆ ಎಂದು ಪ್ರಸ್ತಾಪಿಸಿದ್ದರು ಎಂದರು.
ವಿಶ್ವಕರ್ಮ ಸಂಘದ ಅಧ್ಯಕ್ಷ ಬೈಂದೂರು ನಾರಾಯಣ ಆಚಾರ್ ಮಾತನಾಡಿ, ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಕರ್ಮ ಜಯಂತ್ಯೂತ್ಸವ ನಡೆಯಲಿದೆ. ಅದರ ಪ್ರಯುಕ್ತ ತ್ರಾಸಿಯಿಂದ ಬೃಹತ್ ವಾಹನ ಜಾಥಾ ನಡೆಯಲಿದೆ. ವಿಶ್ವಕರ್ಮ ಸಮಾಜದವರು ಈ ವಾಹನ ಜಾಥದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ವಿಶ್ವಕರ್ಮ ಸಮಾಜದ ಗೌರವ ಅಧ್ಯಕ್ಷ ಉದ್ದಾಲಗುಡ್ಡಿ ಗಂಗಾಧರ ಆಚಾರ್, ರಮೇಶ ಆಚಾರ್ ಬಂಡಿಮಠ, ನಾಗಪ್ಪಯ್ಯ ಆಚಾರ್ ನಡೂರು ಉಪಸ್ಥಿತರಿದ್ದರು.