ಕುಂದಾಪುರ ಮಿರರ್ ಸುದ್ದಿ…
ಕೋಟ: ಶಾಲಾ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆಯ ಆಶ್ರಯದಲ್ಲಿ ಇತ್ತೀಚಿಗೆ ಮಣಿಪಾಲದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸರಕಾರಿ ಸಂಯುಕ್ತ ಪ್ರೌಢಶಾಲೆ, ಮಣೂರಿನ 8ನೇ ತರಗತಿ ವಿದ್ಯಾರ್ಥಿ ದಿಗಂತ್ ಕೋಟತಟ್ಟು ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದು ಮೂರು ಚಿನ್ನದ ಪದಕಗಳೊಂದಿಗೆ ಚಾಂಪಿಯನ್ ಆಗಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ರಶ್ಮಿ ರಾಘವೇಂದ್ರ ಪೂಜಾರಿಯವರ ಪುತ್ರರಾಗಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕ ವೃಂದ ವಿದ್ಯಾರ್ಥಿ ಸಾಧನೆಗಾಗಿ ಈತನನ್ನು ವಿಶೇಷವಾಗಿ ಅಭಿನಂದಿಸಿದೆ.