ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತಾಲೂಕಿನ ಗ್ರಾಮೀಣ ಭಾಗವಾದ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟು ಪ್ರದೇಶಕ್ಕೆ ನೂತನ ಸರ್ಕಾರಿ ಸಂಪರ್ಕಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಗುಡ್ಡಟ್ಟು ವಿನಾಯಕ ದೇವಸ್ಥಾನದಲ್ಲಿ ಕುಂದಾಪುರ ಘಟಕದ ವ್ಯವಸ್ಥಾಪಕ ಬಸವ ತಿಮಪ್ಪ ನಾಯ್ಕ ಉದ್ಘಾಟಿಸಿ, ಸರ್ಕಾರೀಬಸ್ ಸೌಲಭ್ಯವನ್ನು ಗ್ರಾಮಸ್ಥರು ಬಳಸುವಂತೆ ಕರೆ ನೀಡಿದರು.
ಈ ಸಂದರ್ಭ ವಿಭಾಗಿಯ ಯಾಂತ್ರಿಕ ಅಭಿಯಂತರ ಜಯ ಕುಮಾರ್, ಘಟಕ ಸಿಬ್ಬಂದಿ ಉದಯ ಶೆಟ್ಟಿ, ಸಂಚಾರಿ ನಿಯಂತ್ರಕರಾದ ಚಂದ್ರಶೇಖರ್, ರಮೇಶ ಪೂಜಾರಿ, ಮಾಜಿ ಸಂಚಾರಿ ಅಧೀಕ್ಷಕ ಸತ್ಯನಾರಾಯಣ ಕೆದ್ಲಾಯ, ಚಾಲಕ ಸಂದೇಶ, ನಿರ್ವಾಹಕ ರಾಜು ಜಾದವ್, ಗ್ರಾಮ ಪಂಚಾಯತಿ ಸದಸ್ಯ ಉದಯ ಯಡಾಡಿ, ಸಾಮಾಜಿಕ ಕಾರ್ಯಕರ್ತ ದಿನೇಶ ಪುತ್ರನ್ ವಿಠಲವಾಡಿ, ದೇವಾಸ್ಥಾನದ ಧರ್ಮದರ್ಶಿ ಅನಂತ ಪದ್ಮನಾಭ ಅಡಿಗ, ಪುರೋಹಿತ ಶಂಕರ ಅಡಿಗ ಗುಡ್ಡಟ್ಟು, ಗಂಗಾಧರ ಅಡಿಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನೂತನ ಬಸ್ಸು ಬೆಳಿಗ್ಗೆ 11:10 ಕ್ಕೆ ಕುಂದಾಪುರದಿಂದ ಹೊರಟು ಮಧ್ಯಾಹ್ನ 12.40 ಕ್ಕೆ ಗುಡ್ಡಟ್ಟು ತಲುಪಲಿದೆ. ಮಧ್ಯಾಹ್ನ 2.30ಕ್ಕೆ ಗುಡ್ಡಟ್ಟುವಿನಿಂದ ಹೊರಡಲಿದೆ. ಆದರೆ ಈ ಸಮಯ ಗ್ರಾಮಸ್ಥರಿಗೆ ಅನುಕೂಲವಾಗಿಲ್ಲ ಎಂದು ಗ್ರಾ.ಪಂ.ಸದಸ್ಯ ಉದಯಕುಮಾರ್ ಆರೊಪಿಸಿದ್ದು, ಸಮಯ ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.