ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಾಧನೆ ಎನ್ನುವುದು ಕನ್ನಡಿಯ ಗಂಟಲ್ಲ. ಕೈಗೆ ನಿಲುಕದ ಗಗನ ಕುಸುಮವೂ ಆಲ್ಲ ಬದಲಾಗಿ ಅದು ಸತತ ಪ್ರಯತ್ನ ಧೃಢ ಸಂಕಲ್ಪಕ್ಕೆ ತಲೆಬಾಗುವ ಸಿದ್ದಿ. ಎನ್. ಎಸ್. ಎಸ್ ವಿದ್ಯಾರ್ಥಿ ಜೀವನದ ಸರ್ವಾಂಗೀಣ ವ್ಯಕ್ತಿತ್ವವನ್ನು ಕಟ್ಟಿ ಬೆಳೆಸುತ್ತದೆ ಎಂದು ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ರಾಜೇಂದ್ರ ನಾಯಕ ಅಭಿಮತಿಸಿದರು.
ಅವರು ಸರಕಾರಿ ಪ್ರೌಢ ಶಾಲೆ ಕೆ.ಪಿ. ಎಸ್. ಕೋಟೇಶ್ವರದಲ್ಲಿ ಎನ್. ಎಸ್. ಎಸ್. ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹೊಳ್ಳ ಅವರು ವಿದ್ಯಾರ್ಥಿಗಳಿಗೆ ಸೇವೆಗಾಗಿ ಬಾಳು ಎಂಬ ಎನ್. ಎಸ್. ಎಸ್. ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳಿಗೆ ಎನ್ ಎಸ್ ಎಸ್ ಡೈರಿಯನ್ನು ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಉಪಪ್ರಾಂಶುಪಾಲ ಚಂದ್ರ ಶೇಖರ್ ಶೆಟ್ಟಿಯವರು ಎನ್. ಎಸ್. ಎಸ್. ವಿದ್ಯಾರ್ಥಿಗಳು ಸಂಪಾದಿಸಿದ ಪತ್ರಿಕಾ ಅಂಕಣ ಲೇಖನಗಳ ಸಂಗ್ರಹ ಮನೋಲ್ಲಾಸ ಕಥಾಕಾಲ ವಚನ ಜ್ಯೋತಿ ಎಂಬ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಎನ್ ಎಸ್ ಎಸ್ ವ್ಯಕ್ತಿತ್ವಕ್ಕಾಗಿ ಮತ್ತು ಸೇವೆಗಾಗಿ ನಾಡಿನ ಸೇವೆಯಿಂದ ವ್ಯಕ್ತಿಯ ಬಾಳು ಹಸನಾಗುತ್ತದೆ ಎಂದು ಪ್ರತಿಪಾದಿಸಿದರು.
ಎನ್. ಎಸ್. ಎಸ್. ಅಧಿಕಾರಿ ರಮಾನಂದ ನಾಯಕ್ ಅವರು ಕಾರ್ಯಕ್ರಮ ಸಂಘಟಿಸಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾನೇಕೆ ಎನ್. ಎಸ್. ಎಸ್. ಸೇರಿದೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಾದ ಸ್ಪೂರ್ತಿ ಸಮೃದ್ಧಿ ಮತ್ತು ಪ್ರಣತಿ ತಮ್ಮ ಅನಿಸಿಕೆ ವ್ಯಕ್ತಡಿಸಿ ಸ್ವಯಂ ಸೇವಕರಾಗಿದ್ದಕ್ಕೆ ಹೆಮ್ಮೆ ಪಟ್ಟರು.
ಧರಣಿ ಸರ್ವರಿಗೂ ಧನ್ಯವಾದ ಅರ್ಪಿಸಿದರು. ಸುಚಿತ್ರ ಸಂಗಡಿಗರು ಪ್ರಾರ್ಥಿಸಿದರು. ವೇದಿಕೆಯಲ್ಲಿ ಎನ್. ಎಸ್. ಎಸ್. ಕಾರ್ಯದರ್ಶಿ ಸ್ಪೂರ್ತಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ಉದಯ ಮಡಿವಾಳ ಎಂ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್ ಎಸ್ ಎಸ್ ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿದರು.