ಪಡುಕರೆ ರಜತ ಪರ್ವ ಕಾರ್ಯಕ್ರಮದಲ್ಲಿ ಆನಂದ್ ಸಿ ಕುಂದರ್ ದಂಪತಿಗಳಿಗೆ ಹುಟ್ಟೂರ ಸನ್ಮಾನ
ಕುಂದಾಪುರ ಮಿರರ್ ಸುದ್ದಿ…
ಕೋಟ: ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಅರ್ಪಿಸಿಕೊಂಡಾಗ ಅದರ ನೈಜ ಸ್ಥಿತಿಗತಿ ಅನಾವರಣಗೊಳ್ಳುತ್ತದೆ ಎಂದು ಪ್ರಸಿದ್ಧ ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್ ಹೇಳಿದರು.
ಕೋಟ ಪಡುಕರೆ ಐಸ್ ಪ್ಯ್ಲಾಂಟ್ ಸಮೀಪ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಟ ಪಡುಕರೆ ಇವರ ಆಶ್ರಯದಲ್ಲಿ 25ನೇ ವರ್ಷದ ಗಣೇಶೋತ್ಸವ ರಜತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜದ ಏಳು ಬೀಳುಗಳನ್ನು ಅರಿತು ಇಲ್ಲಿನ ಪ್ರತಿಯೊಬ್ಬರ ನೋವು ನಲಿಯುಗಳಿಗೆ ಸ್ಪಂದಿಸುವ ಆನಂದ್ ಸಿ ಕುಂದರ್ ಸಾಮಾಜಿಕ ಬದ್ಧತೆಯನ್ನು ಆಶಯದಲ್ಲಿ ಕೊಂಡಾಡಿದರು.
ತಾನು ಈ ಸಮಾಜದಲ್ಲಿ ಬದುಕುತ್ತೇನೆ ಎಂಬುವುದು ಮುಖ್ಯವಲ್ಲ ಬದಲಾಗಿ ಸಮಾಜಕ್ಕೆ ನಾವೆನು ಕೊಡುಗೆ ನೀಡುತ್ತಿದ್ದೇವೆ ಅದು ಮುಖ್ಯವಾಗುತ್ತದೆ. ಈ ದಿಸೆಯಲ್ಲಿ ಪಡುಕರೆ ಎಂಬ ಗ್ರಾಮೀಣ ಭಾಗವನ್ನು ಶೈಕ್ಷಣಿಕ ಕ್ರಾಂತಿಯಾಗಿಸಿ ಅದೆಷ್ಟೊ ವಿದ್ಯಾರ್ಥಿಗಳ ಬದುಕಿಗೆ ಮುನ್ನಡಿ ಬರೆದಿದ್ದಾರೆ. ಇಂಥಹ ವ್ಯಕ್ತಿಗಳು ಈ ವ್ಯವಸ್ಥೆಯಲ್ಲಿ ಬಲು ಅಪರೂಪವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಮಾಜಸೇವಕ ಆನಂದ್ ಸಿ ಕುಂದರ್ ದಂಪತಿಗಳಿಗೆ ಹುಟ್ಟೂರ ಸನ್ಮಾನ ನೀಡಿ ಗೌರವಿಸಲಾಯಿತು.
ಈ ವೇಳೆ ಗಣೇಶೋತ್ಸವಕ್ಕೆ ಸ್ಥಳಾವಕಾಶ ನೀಡಿದ ಸ್ಥಳದಾನಿ ಮಣೂರು ರಾಮ ಹೊಳ್ಳ ಇವರನ್ನು ಅಭಿನಂದಿಸಲಾಯಿತು.
ಸ್ಥಳೀಯವಾಗಿ ಗಣೇಶೋತ್ಸವಕ್ಕೆ ಆರಂಭಿಕ ಮೆರುಗು ನೀಡಿದ ಗಣೇಶ್, ನಿತೀನ್ ಮೆಂಡನ್, ವಿನೋದ್ ಮೆಂಡನ್ ಇವರನ್ನು ಗುರುತಿಸಿ ಗೌರವಿಸಲಾಯಿತು.
ಈಜು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ದಿಗಂತ್ ಪೂಜಾರಿ ಕೋಟತಟ್ಟು ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶಶಿಧರ ತಿಂಗಳಾಯ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಉದ್ಯಮಿ ಬಿಜು ನಾಯರ್, ಕೆ.ಎಮ್ ಜಾಫರ್, ಸುರೇಶ್ ಕುಂದರ್, ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಸತೀಶ್ ಹೆಚ್ ಕುಂದರ್, ರಾಷ್ಟ್ರೀಯ ಮಾನವ ಹಕ್ಕು ಸಮಿತಿ ರಾಜ್ಯ ಪ್ರಧಾನಕಾರ್ಯದರ್ಶಿ ಡಾ.ದಿನೇಶ್ ಗಾಣಿಗ, ಕೋಟ ಗ್ರಾ.ಪಂ ಸದಸ್ಯ ಪ್ರದೀಪ್ ಸಾಲಿಯಾನ್, ಸ್ಥಳೀಯರಾದ ಗುಲಾಬಿ ಬಂಗೇರ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು. ದೀಪಿಕಾ ರವಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಸಂತೋಷ್ ಕುಮಾರ್ ಕೋಟ ನಿರೂಪಿಸಿ ವಂದಿಸಿದರು.