ಕುಂದಾಪುರ ಮಿರರ್ ಸುದ್ದಿ…
ಕೋಟ: ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವ ಮೂಲಕ ನಮ್ಮ ಜೀವನದ ನೈಜತೆಯನ್ನು ಪ್ರದರ್ಶಿಸಬೇಕು ಆಗ ಮಾತ್ರ ದೇಶದ ಮಹಾನ್ ನಾಯಕರಿಗೆ ಗೌರವ ಸಲ್ಲಿಸಿದಂತೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದ್ದಾರೆ.
ಕೋಟ ಗ್ರಾಮಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಶಾಸ್ತ್ರೀಜೀ ಜನ್ಮದಿನಾಚರಣೆ ಪ್ರಯುಕ್ತ ಘನ ಹಾಗೂ ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಪರಿಸರದಲ್ಲಿ ಅತಿಯಾಗಿ ಮಲಿನಗೊಳ್ಳುತ್ತಿರುವ ಪ್ಲಾಸ್ಟಿಕ್ ನಿಂದ ಬಾರಿ ಹಾನಿಯನ್ನು ಉಂಟುಮಾಡುತ್ತಿದೆ.ಇದಕ್ಕೆ ಹೊಣೆ ನಾವುಗಳು ಹೊಣೆಗಾರಗಿದ್ದೇವೆ ಇದರಿಂದ ಮುಕ್ತರಾಗಲು ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ತರಬೇಕಾಗಿದೆ.ಪ್ರಸ್ತುತ ಕಾಲಘಟ್ಟದಲ್ಲಿ ಸ್ಥಳೀಯ ಪಂಚಾಯತ್‍ಗಳು ಘಟಕಗಳ ಮೂಲಕ ವಿಲೇವಾರಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಇದರಿಂದ ರಸ್ತೆ ಆಯಕಟ್ಟಿನ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕಸಕಡ್ಡಿಗಳ ಎಸೆಯುವವರ ಸಂಖ್ಯೆ ನಿಯಂತ್ರಣಕ್ಕೆ ಬರಬಹುದು,ಪರಿಸರದ ಬಗ್ಗೆ ಆಯಾ ಭಾಗಗಳ ಶಾಲಾ ಕಾಲೇಜು,ಕಂಪನಿ,ಇನ್ನಿತರ ಭಾಗಗಳಿಗೆ ತೆರಳಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರಲ್ಲದೆ ತಮ್ಮ ಸಂಸ್ಥೆಯ ವತಿಯಿಂದ 2ಸಾವಿರ ಚೀಲಗಳನ್ನು ಕಸಸಂಗ್ರಹಣೆಗೆ ಪಂಚಾಯತ್‍ಗೆ ನೀಡುವುದಾಗಿ ಘೋಷಿಸಿದರು.ಮುಂದಿನ ದಿನಗಳಲ್ಲಿ ಇದರ ಸಮರ್ಪಕ ಅನುಷ್ಠಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ಇತ್ತರು.
ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆ ವಹಿಸಿದರು
ಕಾರ್ಯಕ್ರಮದಲ್ಲಿ ಗಾಂಧಿಜೀ ಹಾಗೂ ಶಾಸ್ತ್ರೀಜೀ ಭಾವಚಿತ್ರಕ್ಕೆ ಪುಷ್ಭನಮನ ಗೈಯಲಾಯಿತು.ಪಂಚಾಯತ್ ವ್ಯಾಪ್ತಿಯ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಸಂಘಸಂಸ್ಥೆಗಳನ್ನು ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಪಂಚಾಯತ್ ನೋಡೆಲ್ ಅಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ, ಕೋಟ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ವಿಶ್ವನಾಥ್, ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಪೂಜಾರಿ,ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಾಹಕರಾದ ಅನ್ನಪೂರ್ಣ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಚಂದ್ರಶೇಖರ ಆಚಾರ್ಯ ಸ್ವಾಗತಿಸಿ,ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಪ್ರಾಸ್ತಾವನೆ ಸಲ್ಲಿಸಿ ನಿರ್ವಹಿಸಿದರು.ಸದಸ್ಯ ಚಂದ್ರ ಪೂಜಾರಿ ವಂದಿಸಿದರು.