ಕುಂದಾಪುರ :ಶಿಕ್ಷಣದ ರಾಯಭಾರಿ ಜಿ. ಎಮ್.ಗೊಂಡರವರಿಗೆ ಸಾಧಕ ಪ್ರಶಸ್ತಿ

0
175

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ಶ್ರೀ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ಜೆಸಿ ಸಪ್ತಾಹದ ಪ್ರಯುಕ್ತ ಶಿಕ್ಷಣದ ರಾಯಭಾರಿಯಾಗಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಪದವಿ ಪೂರ್ವ ಪ್ರಾಂಶುಪಾಲರಾದ ಜಿ. ಎಮ್. ಗೊಂಡರವರನ್ನು ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Click Here

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷರಾದ ಡಾ ಸೋನಿ ವಹಿಸಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕುಂದಾಪುರ ಕಾರ್ತಿಕ್ ಸ್ಕ್ಯಾನಿಂಗ್ ನ ನಿರ್ದೇಶಕರಾದ ಡಾ. ಬಿ. ಎಮ್. ಉಡುಪ, ವಲಯ 15ರ ಪೂರ್ವ ವಲಯಾಧ್ಯಕ್ಷ ಅಲನ್ ರೋಹನ್ ವಾಜ್ ಉಪ್ಪುಂದ ಜೇಸಿ ಪೂರ್ವ ಅಧ್ಯಕ್ಷರಾದ ಪ್ರಕಾಶ್ ಭಟ್ ವಲಯ 15 ರ ತರಬೇತುದಾರ ಕೆ.ಕೆ. ಶಿವರಾಮ್ , ಜೆಸಿಐ ಕುಂದಾಪುರ ಸಿಟಿ ಸ್ಥಾಪಕಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ನಾಗೇಶ ನಾವಡ, ವಿಜಯ್ ಭಂಡಾರಿ, ಶ್ರೀಧರ್ ಸುವರ್ಣ ಚಂದ್ರಕಾಂತ್, ಗಿರೀಶ್ ಹೆಬ್ಬಾರ್, ಪ್ರಶಾಂತ್ ಹವಾಲ್ದಾರ್, ನಿಕಟ ಪೂರ್ವ ಅಧ್ಯಕ್ಷ ಅಭಿಲಾಶ್, ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ. ಡಿ’ಕೋನ್ಹ, ಜೊತೆ ಕಾರ್ಯದರ್ಶಿ ಶೈಲಾ ಲೂಯಿಸ್,
ಸಪ್ತಾಹದ ಸಭಾಪತಿ ರಾಘವೇಂದ್ರ ಕುಲಾಲ್, ಹೆಮ್ಮಾಡಿ ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here