ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತಾಲೂಕಿನ ಬಸ್ರೂರು ಮೂರುಕೈನಿಂದ ಬಸ್ರೂರು ಮಾರ್ಗವಾಗಿ ಸಿದ್ದಾಪುರಕ್ಕೆ ಹೋಗುವ ರಸ್ತೆಯ ಮೂಡ್ಡಕಟ್ಟೆ ದೊಡ್ಡನೆ ಎಂಬಲ್ಲಿ ಈ ಅಪಾಯಕಾರಿ ತಿರುವು ಇದ್ದು ಈ ಪ್ರದೇಶದಲ್ಲಿ ಎದುರುಗಡೆಯಿಂದ ಬರುವ ವಾಹನಗಳು ತೀರಾ ಸಮೀಪಕ್ಕೆ ಬರುವ ತನಕವೂ ಕಾಣಿಸುವುದಿಲ್ಲ.
ಪ್ರಸ್ತುತ ಧ.ಗ್ರಾ. ಯೋಜನೆಯ ಬಸ್ರೂರಿನ ವಿಪತ್ತು ನಿರ್ವಹಣ ಘಟಕದ ವತಿಯಿಂದ ತಿರುವಿನ ಸುತ್ತ ಬೆಳೆದಿರುವ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಗಿದೆ. ಅಲ್ಲದೇ ಹಂಗಳೂರು ಲಯನ್ಸ್ ಸೂಚನಾ ಫಲಕ ಅಳವಡಿಸಲಾಯಿತು.