ಕುಂದಾಪುರ :ಸೆ. 26,27 ರಂದು ಲಯನ್ಸ್ ಸಂಸ್ಥೆಯಿಂದ ಹದಿಹರೆಯದವರಿಗಾಗಿ ಕೌಶಲ್ಯಗಳು – ಕಾರ್ಯಾಗಾರ

0
573

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಲಯನ್ಸ್ ಜಿಲ್ಲೆ 317Cನ ಲಯನ್ಸ್ ಕ್ಲಬ್ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಹಾಗೂ ಲಯನ್ಸ್ ಕ್ಲಬ್ ಸಿಟಿ ಸೆಂಟರ್‌ನ ಸಂಯುಕ್ತ ಆಶ್ರಯದಲ್ಲಿ ಲಯನ್ಸ್ ಇಂಟರ್ನ್ಯಾಷನಲ್ ಫೌಂಡೇಶನ್‌ನ ಕಾರ್ಯಕ್ರಮವಾದ ಲಯನ್ಸ್ ಕ್ವೆಸ್ಟ್‌ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರಿಗಾಗಿ ಕೌಶಲ್ಯಗಳ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಇದೇ ತಿಂಗಳ 26,27ರಂದು ಕುಂದಾಪುರ ಎಜುಕೇಷನ್ ಸೊಸೈಟಿಯ ಅಧೀನ ಶಿಕ್ಷಣ ಸಂಸ್ಥೆಗಳಾದ ಎಚ್ಎಮ್ಎಮ್ ಮತ್ತು ವಿಕೆ ಆರ್ ಶಾಲೆ ಕುಂದಾಪುರದಲ್ಲಿ ನಡೆಯಲಿದೆ.

Click Here

ಕಾರ್ಯಕ್ರಮವನ್ನು ಮಾಜಿ ಶಾಸಕ, ಸಂಸ್ಥೆಯ ಮುಖ್ಯಸ್ಥರಾದ ಬಿ.ಎಮ್. ಸುಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಸೋನ್ಸ್ ಹಾಗೂ ಜಯಕರ್ ಶೆಟ್ಟಿ ಉಪಸ್ಥಿತರಿರುವರು.ಉದ್ಟಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯಕ್ರಮದ ಮುಖ್ಯ ಸಂಘಟಕರಾದ ಡಾ. ಭಾರ್ಗವಿ ಐತಾಳ್ ಹೆಬ್ರಿ ವಹಿಸಲಿದ್ದು. ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಸಿಟಿ ಸೆಂಟರ್ ನ ಅಧ್ಯಕ್ಷೆ ವೀಣಾ ಕೋಟ್ಯಾನ್, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ಉಪಸ್ಥಿತರಿರುವರು. ಕಾರ್ಯಾಗಾರದಲ್ಲಿ ಪ್ರಧಾನ ತರಬೇತುದಾರರಾಗಿ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಮಲ್ಟಿಪಲ್ ಲಯನ್ಸ್ ಕ್ವೆಸ್ಟ್ ತರಬೇತುದಾರರಾದ ಮಂಗಳೂರಿನ ಕವಿತಾ ಎಸ್ ಶಾಸ್ತ್ರಿ ಅವರು ಭಾಗವಹಿಸಲಿದ್ದಾರೆ. ದಿ. 27 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಡಾ.ನೇರಿ ಕರ್ನೇಲಿಯೋ, ಮಾಜಿ ಜಿಲ್ಲಾ ಗವರ್ನರ್ ಅಂತರಾಷ್ಟ್ರೀಯ ತರಬೇತುದಾರರಾದ ನೀಲಕಾಂತ ಎಮ್ ಹೆಗಡೆಯವರು ಭಾಗವಹಿಸಿ ದೃಢೀಕರಣ ಪತ್ರ ನೀಡಲಿದ್ದಾರೆ ಎಂದು ಲಯನ್ಸ್ ಕ್ರೆಸ್ಟ್ ಜಿಲ್ಲಾ ಸಂಯೋಜಕಿ ಸರಸ್ವತಿ ಗಣೇಶ್ ಪುತ್ರನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here