ತಲ್ಲೂರಿನಲ್ಲಿ ರೋಜರಿ ಕೋ – ಆಪರೇಟಿವ್ ಸೊಸೈಟಿ 9ನೇ ಶಾಖೆಯ ಉದ್ಘಾಟನೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಹಕಾರಿ ಸಂಸ್ಥೆಗಳು ಸಮಾಜದಲ್ಲಿ ಉತ್ತಮ ಶಿಕ್ಷಣಕ್ಕೆ ಉತ್ತೇಜನ ನೀಡಿದರೆ ಜಬಾವ್ಧಾರಿಯುತ ಸಮಾಜ ನಿರ್ಮಿಸಲು ಸಹಕರಿಸಿದಂತಾಗುತ್ತದೆ ಎಂದು ಕುಂದಾಪುರ ಹೋಲಿ ರೋಜರಿ ಚರ್ಚಿನ ಧರ್ಮಗುರುಗಳು ಸ್ಟ್ಯಾನಿ ತ್ರಾವ್ರೋ ಹೇಳಿದರು.
ಅವರು ತಲ್ಲೂರಿನ ಡೆಜಾನ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡ ರೋಜರಿ ಕೋ – ಆಪರೇಟಿವ್ ಸೊಸೈಟಿ 9ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಅನಾದಿ ಕಾಲದಿಂದಲೂ ಭಾರತದ ಗ್ರಾಮೀಣ ಮಹಿಳೆಯರು ದವಸ ಧಾನ್ಯ ಹಾಗೂ ಅಲ್ಪಸ್ವಲ್ಪ ಗಣವನ್ನು ಉಳಿತಾಯ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಅವರ ಆಲೋಚನೆಯೇ ಇಂದು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ದಾರಿಯಾಗಿದೆ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಸಹಾಯಕ ಉಪನಿಬಂಧಕ ಅರುಣ್ ಕುಮಾರ್ ಎಸ್.ವಿ. ಭದ್ರತಾ ಕೊಠಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಚೇರಿಯ ಕಾಮಗಾರಿ ನಡೆಸಿದ ಸತೀಶ್ ಆಚಾರ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಲ್ಲೂರು ಸೈಂಟ್ ಪ್ರಾನ್ಸಿಸ್ ಅಸಿಸಿ ಚರ್ಚ್ ಧರ್ಮಗುರು ಫಾ. ಎಡ್ವಿನ್ ಡಿ’ಸೋಜಾ, ತಲ್ಲೂರು ಗ್ರಾ.ಪಂ.ಅಧ್ಯಕ್ಷ ಗಿರೀಶ್ ಎಸ್.ನಾಯ್ಕ್, ಗ್ರಾ.ಪಂ. ಸದಸ್ಯೆ ಜೂಡಿತ್ ಮೆಂಡೋನ್ಸಾ, ತಲ್ಲೂರು ಶಾಖೆಯ ಸಭಾಪತಿ ಓಜ್ಲಿನ್ ರೆಬೆಲ್ಲೋ, ರೋಜರಿ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೇಬಲ್ ಡಿ’ಆಲ್ಮೇಡಾ, ನಿರ್ದೇಶಕ ಫಿಲೀಫ್ ಡಿ’ಕೋಸ್ತ್ ಉಪಸ್ಥಿತರಿದ್ದರು.
ರೋಜರಿ ಕ್ರೆಡಿಟ್ ಸೊಸೈಟಿ ಸಂಸ್ಥೆಯ ಅಧ್ಯಕ್ಷ ಜೋನ್ಸನ್ ಡಿ’ಆಲ್ಮೇಡಾ ಸ್ವಾಗತಿಸಿ, ಪ್ರಾಸ್ತಾವಿಸಿದರು. ಉಪಾಧ್ಯಕ್ಷ ಕಿರಣ್ ಲೋಬೋ ವಂದಿಸಿದರು. ಶಾಂತಿ ಡಿ’ ಆಲ್ಮೇಡಾ ನಿರೂಪಿಸಿದರು.